ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ‘ಆಹಾರ, ಪಾನೀಯ’ಗಳ ವೆಚ್ಚ 1.17 ಕೋಟಿ ರೂ.!

Update: 2018-12-18 16:47 GMT

ಚೆನ್ನೈ, ಡಿ.18: ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರು ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ 75 ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ವೇಳೆ 1.17 ಕೋಟಿ ರೂ.ಗಳನ್ನು ‘ಆಹಾರ ಮತ್ತು ಪಾನೀಯ’ಗಳಿಗೆ ವ್ಯಯಿಸಲಾಗಿದೆ ಎಂದು ವರದಿಯಾಗಿದೆ.

ಇದು ಜಯಲಲಿತಾರಿಗೆ ಚಿಕಿತ್ಸೆ ನೀಡಿದ ಬ್ರಿಟನ್ ಮೂಲದ ತಜ್ಞ ರಿಚರ್ಡ್ ಬೀಲೆಯವರಿಗೆ ನೀಡಲಾದ ಮೊತ್ತಕ್ಕಿಂತ ಅಧಿಕ. ಬೀಲೆಯವರಿಗೆ 92 ಲಕ್ಷ ರೂ.ಗಳನ್ನು ಪಾವತಿಸಲಾಗಿತ್ತು.

ಜಯಲಲಿತಾರಿಗೆ ಚಿಕಿತ್ಸೆ ನೀಡಲಾಗಿದ್ದ ಕೋಣೆಯ ಬಾಡಿಗೆ 24.1 ಲಕ್ಷ ರೂ.ಗಳಾಗಿದ್ದು, ವಿ.ಕೆ.ಶಶಿಕಲಾ, ಅವರ ಸಂಬಂಧಿಕರು ಹಾಗು ಇತರರ ಕೋಣೆಗಳ ಬಾಡಿಗೆ 1.24  ಕೋಟಿ ರೂ.ಗಳಾಗಿವೆ. ಆಹಾರದ ಬಿಲ್ ಜಯಲಲಿತಾರ ಆಹಾರಗಳನ್ನು ಮಾತ್ರವಲ್ಲ, ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಸಚಿವರು ಹಾಗು ಭದ್ರತಾ ಸಿಬ್ಬಂದಿಯದ್ದೂ ಸೇರಿದೆ ಎಂದು ಅಪೋಲೋ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News