ರಾಜ್ಯಮಟ್ಟದ ಪ.ಪೂ ಕಾಲೇಜುಗಳ ಬಾಲಕಿಯರ ಕಬಡ್ಡಿ ಪಂದ್ಯಾಟ: ಆಳ್ವಾಸ್‍ಗೆ 10ನೇ ಬಾರಿ ಪ್ರಶಸ್ತಿ

Update: 2018-12-19 12:30 GMT

ಮೂಡುಬಿದಿರೆ,ಡಿ.19: ಪದವಿಪೂರ್ವ ಶಿಕ್ಷಣ ಇಲಾಖೆ ತುಮಕೂರು ಹಾಗೂ ಶ್ರೀ ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜು, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ತುಮಕೂರಿನಲ್ಲಿ ಡಿಸೆಂಬರ್ 16 ಮತ್ತು 17ರಂದು ಜರುಗಿದ ರಾಜ್ಯಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಬಾಲಕಿಯರ ತಂಡವು ಧಾರವಾಡ ಜಿಲ್ಲೆಯನ್ನು 46-11 ಅಂಕಗಳಿಂದ ಸೋಲಿಸಿ 10ನೇ ಬಾರಿಗೆ ಪ್ರಶಸ್ತಿಯನ್ನು ಪಡೆಯಿತು.

ಬಾಲಕಿಯರ ವಿಭಾಗದಲ್ಲಿ ಸರ್ವಾಂಗೀಣ ಆಟಗಾರ್ತಿಯಾಗಿ ವಿನುಶ್ರೀ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜಯಿ ತಂಡಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವರವರು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News