×
Ad

ಮಂಗಳೂರು: ಮೊಬೈಲ್ ಅಂಗಡಿಗಳಿಗೆ ದಾಳಿ

Update: 2018-12-19 21:46 IST

ಮಂಗಳೂರು,ಡಿ.19: ಆ್ಯಪಲ್ ಮೊಬೈಲ್ ಫೋನ್ ಕಂಪೆನಿಯ ನಕಲಿ ಬಿಡಿ ಭಾಗಗಳ ಮಾರಾಟದ ಆರೋಪದ ಮೇಲೆ ನಗರದ ಸೆಂಟ್ರಲ್ ಮಾರ್ಕೆಟ್ ಪರಿಸರದ 5 ಅಂಗಡಿಗಳಿಗೆ ಬಂದರು ಪೊಲೀಸರು ಬುಧವಾರ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿ ಕಾಪಿ ರೈಟ್‌ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.

ಆ್ಯಪಲ್ ಕಂಪೆನಿಯ ಅಧಿಕಾರಿಗಳು ನೀಡಿದ ದೂರಿನ ಮೇಲೆ ಪೊಲೀಸರು ಈ ದಾಳಿ ನಡೆಸಿದರು. ದಾಳಿಗೊಳಗಾದ ಅಂಗಡಿಗಳಿಂದ ಆ್ಯಪಲ್ ಕಂಪೆನಿಯ ನಕಲಿ ಬಿಡಿ ಭಾಗಗಳಾದ ಬ್ಯಾಟರಿ, ಬ್ಯಾಕ್ ಪ್ಯಾನೆಲ್, ಇಯರ್ ಫೋನ್, ಮೊಬೈಲ್ ಚಾರ್ಜರ್ ಇತ್ಯಾದಿಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News