×
Ad

ಮಂಗಳೂರು: ಗಾಂಜಾ ಸಹಿತ ಆರೋಪಿ ಸೆರೆ

Update: 2018-12-19 21:50 IST

ಮಂಗಳೂರು, ಡಿ.19: ನಗರದ ಎ.ಬಿ. ಶೆಟ್ಟಿ ವೃತ್ತದ ಬಳಿಯ ರಾಘವೇಂದ್ರ ಕಾಂಪ್ಲೆಕ್ಸ್‌ನ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಕಾರು ನಿಲ್ಲಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಬಂದರ್ ನಿವಾಸಿ ಫಾರೂಕ್ (49)ಎಂಬಾತನನ್ನು ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧ ಪತ್ತೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ 86 ಗ್ರಾಂ ತೂಕದ 2,500 ರೂ. ಮೌಲ್ಯದ ಗಾಂಜಾ, 500ರೂ. ನಗದು, 9,000 ರೂ. ಮೌಲ್ಯದ ಎರಡು ಮೊಬೈಲ್ ಫೋನ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ 12 ಲಕ್ಷ ರೂ. ಮೌಲ್ಯದ ಬ್ರೀಝಾ ಕಾರು ಸಹಿತ ಒಟ್ಟು 12,12,000 ರೂ. ಬೆಲೆ ಬಾಳುವ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಡಿ.12ರಂದು ಖಚಿತ ವರ್ತಮಾನದ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News