×
Ad

ಡಿ.20 ರಿಂದ ಬೆಳ್ತಂಗಡಿ ದಾರುಸ್ಸಲಾಮ್ 2ನೇ ವಾರ್ಷಿಕೋತ್ಸವ-ಶಂಸುಲ್ ಉಲಮಾ ಆಂಡ್ ನೇರ್ಚೆ

Update: 2018-12-19 22:34 IST

ಬೆಳ್ತಂಗಡಿ,ಡಿ.19: ದಾರುಸ್ಸಲಾಂ ಎಜ್ಯುಕೇಷನ್ ಸೆಂಟರ್ ಇದರ 2ನೇ ವಾರ್ಷಿಕೋತ್ಸವ ಹಾಗೂ ಶಂಸುಲ್ ಉಲಮಾ ಆಂಡ್ ನೇರ್ಚೆ ಡಿ.20 ರಿಂದ 23ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಬೆಳ್ತಂಗಡಿ ಕೇಂದ್ರ ಖಿಲ್‍ರಿಯಾ ಜುಮಾ ಮಸೀದಿ ವಠಾರದಲ್ಲಿ ಜರಗಲಿದೆ. 

20 ರಂದು ಬೆಳಿಗ್ಗೆ ಸೈಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ನೇತೃತ್ವದಲ್ಲಿ ಬೆಳ್ತಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾದ ಬಿ.ಎ ನಝೀರ್ ಧ್ವಜಾರೋಹಣಗೈಯಲಿದ್ದು, ಸಂಜೆ ಧಾರ್ಮಿಕ ಕಾರ್ಯಕ್ರಮಗಳನ್ನು ದ.ಕ. ಜಿಲ್ಲಾ ಖಾಝಿ ತ್ವಾಖಾ ಉಸ್ತಾದರು ಉದ್ಘಾಟಿಸಲಿದ್ದು, ಅಂತಾರಾಷ್ಟ್ರೀಯ ಭಾಷಣಗಾರ ಸಮೀರ್ ದಾರಿಮಿ ಕೊಲ್ಲಂ ಮುಖ್ಯ ಭಾಷಣಗೈಯಲಿದ್ದಾರೆ.

21 ರಂದು ಅಸರ್ ನಮಾಜಿನ ನಂತರ ಜಲಾಲಿಯಾ ರಾತಿಬ್, ಮಗ್ರಿಬ್ ನಮಾಜಿನ ನಂತರ ಬುರ್ದಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಮ್ಮೇಳನ ಜರುಗಲಿದೆ. ಕಾರ್ಯಕ್ರಮವನ್ನು ಬಂಬ್ರಾನ ಉಸ್ತಾದ್ ಉದ್ಘಾಟಿಸಲಿದ್ದು, ವಲಿಯುದ್ದೀನ್ ಫೈಝಿ ಕೇರಳ ಮುಖ್ಯ ಭಾಷಣಗೈಯಲಿದ್ದಾರೆ. 22 ರಂದು ಬೆಳಿಗ್ಗೆ ಇಸ್ಮಾಯಿಲ್ ಹುದವಿ ಇವರ ನೇತೃತ್ವದಲ್ಲಿ ಲೀಡರ್ಸ್ ಮೀಟ್ ನಂತರ ಸಫ್‍ವಾನ್ ಫೈಝಿ ಹಾಗೂ ಶರೀಫ್ ಪೊನ್ನಾನಿ ಇವರ ನೇತೃತ್ವದಲ್ಲಿ ವಿದ್ಯಾರ್ಥಿ ಸಂಗಮ ಜರಗಲಿದೆ.

ಮಗ್ರಿಬ್ ನಮಾಜಿನ ನಂತರ ಪಾಣಕ್ಕಾಡ್ ಅಬ್ದುಲ್ ನಾಸಿರ್ ಹಯ್ಯಿ ತಂಙಳ್ ಹಾಗೂ ಪಾಣಕ್ಕಾಡ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು ಅಂತರಾಷ್ಟ್ರೀಯ ಭಾಷಣಗಾರ ಇಬ್ರಾಹಿಂ ಖಲೀಲ್ ಹುದವಿ ಮುಖ್ಯ ಭಾಷಣಗೈಯಲಿದ್ದಾರೆ. 23 ರಂದು ಬೆಳಿಗ್ಗೆ ಶಂಸುಲ್ ಉಲಮಾ ಮೊಮ್ಮಗ ಅಮೀರ್ ದಾರಿಮಿ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲಿದ್ ಹಾಗೂ ಖತ್ಮುಲ್ ಕುರ್‍ಆನ್ ಪಾರಾಯಣ ಜರಗಲಿದೆ. ಮಗ್ರಿಬ್ ನಮಾಜಿನ ನಂತರ ಅಂಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ಮಜ್ಲಿಸುನ್ನೂರು ಆಧ್ಯಾತ್ಮಿಕ ಸಂಗಮ ಜರಗಲಿದೆ.

ಸಮಸ್ತ ಅಧ್ಯಕ್ಷರಾದ ಸೈಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಶೈಖುನಾ ಜಬ್ಬಾರ್ ಉಸ್ತಾದ್ ದುವಾ ಆಶೀರ್ವಚನ ನೀಡಲಿದ್ದು, ಅಬ್ದುಲ್ ರಝಾಕ್ ಅಬ್ರಾರಿ ಮುಖ್ಯ ಭಾಷಣಗೈಯಲಿದ್ದಾರೆ. ಎಸ್‍ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಐ.ಕೆ ಮೂಸಾ ದಾರಿಮಿ ಕಕ್ಕಿಂಜೆ ಮಾತನಾಡಲಿದ್ದು, ಕೆ.ಪಿ.ಸಿ. ಜಿಫ್ರಿ ತಂಙಳ್ ಮೂನಿಯೂರು, ಸೈಯ್ಯದ್ ಜಿಫ್ರಿ ಸೀದಿ ಕುಂಞ ತಂಙಳ್, ಅಲೀ ತಂಙಳ್ ಕರಾವಳಿ, ತ್ವಾಹಾ ಜಿಫ್ರಿ ತಂಙಳ್, ಹಬೀಬುರ್ರಹ್ಮಾನ್ ತಂಙಳ್, ಹುಸೈನ್ ಬಾಲವಿ ತಂಙಳ್, ಮುಹಮ್ಮದ್ ಜಿಫ್ರಿ ತಂಙಳ್ ಆತೂರ್, ಅಕ್ರಂ ಅಲಿ ತಂಙಳ್ ಮೊದಲಾದವರು ಭಾಗವಹಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಜಿಫ್ರಿ ತಂಙಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News