×
Ad

ಮಂಜನಾಡಿ: 'ಅಲ್ ಮದೀನಾ'ದಿಂದ ಇಕ್ರಾಂ ಯಾತ್ರೆಗೆ ಚಾಲನೆ

Update: 2018-12-20 12:29 IST

ಮಂಜನಾಡಿ ಡಿ.20: ಮಂಜನಾಡಿಯ ಅಲ್ ಮದೀನಾ ವಿದ್ಯಾಸಮುಚ್ಚಯದ ಬೆಳ್ಳಿಹಬ್ಬದ ಸಂಭ್ರಮಾಚರಣೆಯು ಫೆಬ್ರವರಿ  1, 2, 3ರಂದು ನಡೆಯಲಿದೆ.  ಈ ಪ್ರಯುಕ್ತ ದಅ್ ವಾ ಕಾಲೇಜು ವಿದ್ಯಾರ್ಥಿಗಳು ಹಮ್ಮಿಕೊಂಡಿರುವ 'ಉತ್ತರ ಕರ್ನಾಟಕದೆಡೆಗೆ ಹೆಜ್ಜೆ' ಇಕ್ರಾಂ ಯಾತ್ರೆಗೆ ಮಂಜನಾಡಿಯಲ್ಲಿ ಬುಧವಾರ ಶೈಖುನಾ ಶರಫುಲ್ ಉಲಮಾ ಉಸ್ತಾದರ ಆಶೀರ್ವಾದದೊಂದಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ಸಂಸ್ಥೆಯ ಜನರಲ್ ಮ್ಯಾನೇಜರ್, ದಅ್ ವಾ ಕಾಲೇಜಿನ ಪ್ರಾಂಶುಪಾಲ ಅಬ್ದುಸ್ಸಲಾಂ ಅಹ್ಸನಿ ಮಾತನಾಡಿ ಶುಭ ಹಾರೈಸಿದರು. ಹಿಫ್ಳುಲ್ ಕುರ್ ಆನ್ ಕಾಲೇಜಿನ ಹಾಫಿಳ್ ಇಸ್ಮಾಯೀಲ್ ಹನೀಫಿ ದುಆಗೈದರು. ರಾಜ್ಯ ಎಸ್ಸೆಸ್ಸೆಫ್ ನಾಯಕ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಉಪಸ್ಥಿತರಿದ್ದರು.

ಇಕ್ರಾಂ ಯಾತ್ರೆ ತಂಡಕ್ಕೆ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ ಹಾಫಿಳ್ ಸುಫ್ಯಾನ್ ಸಖಾಫಿ ನೇತೃತ್ವ ನೀಡುತ್ತಿದ್ದಾರೆ. ಯಾತ್ರೆಯಲ್ಲಿ ಅಲ್ ಮದೀನಾದಿಂದ ಮುಹಮ್ಮದ್ ಇಕ್ಬಾಲ್ ಸಖಾಫಿ ಮರ್ಝೂಖಿ ಸಹಿತ  ಒಂಬತ್ತು ಮಂದಿಯ ತಂಡ ಭಾಗವಹಿಸುತ್ತಿದೆ.

ಇಕ್ರಾಂ ತಂಡ ಉತ್ತರ ಕರ್ನಾಟಕದಲ್ಲಿ ದಅ್ ವಾ ಚಟುವಟಿಕೆ, ಸಾಂತ್ವನ, ಕಟ್ಟೆ ಭಾಷಣ, ಟೀ ಪಾರ್ಟಿ ಸಹಿತ ಹಲವಾರು  ಯೋಜನೆಗಳನ್ನು ಹಮ್ಮಿಕೊಂಡಿದೆ. ಧಾರ್ಮಿಕತೆಯ ಅಭ್ಯುದಯಕ್ಕೊಂದು ದಿಟ್ಟ ಹೆಜ್ಜೆಯ ಧ್ಯೇಯದೊಂದಿಗೆ ಈ ಯಾತ್ರೆ ಹೊರಟಿದೆ ಎಂದು ಯಾತ್ರೆಯ ಉಸ್ತುವಾರಿ ನೌಫಲ್ ಮಲಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News