ಉಡುಪಿ: ಡಿ.23ರಂದು ಅಂಬೇಡ್ಕರ್ ಯುವಜನೋತ್ಸವ
Update: 2018-12-20 20:45 IST
ಉಡುಪಿ, ಡಿ.20: ಅಂಬೇಡ್ಕರ್ ಯುವಸೇನೆ ಉಡುಪಿ ಇದರ ಲಾಂಛನ ಬಿಡುಗಡೆಯ ಪ್ರಯುಕ್ತ ಬ್ಲಡ್‌ಬ್ಯಾಂಕ್ ಉದ್ಘಾಟನೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮಗಳನ್ನೊಳಗಂಡ ‘ಅಂಬೇಡ್ಕರ್ ಯುವಜನೋತ್ಸವ’ವನ್ನು ನಡೆಸುವುದಾಗಿ ಯುವಸೇನೆಯ ಅಧ್ಯಕ್ಷ ಹರೀಶ್ ಮಲ್ಪೆತಿಳಿಸಿದ್ದಾರೆ.
ಡಿ.23ರಂದು ಬೆಳಿಗ್ಗೆ 11ಗಂಟೆಗೆ ನಡೆಯುವ ಈ ಕಾರ್ಯಕ್ರಮವನ್ನು ಶ್ರೇಷ್ಠ ಚಿಂತಕ ದಿನೇಶ್ ಅಮೀನ್ ಮಟ್ಟು ಉಧ್ಘಾಟಿಸಲಿದ್ದಾರೆ. ಮೈಸೂರಿನ ಬಾರಕೋಲು ಪತ್ರಿಕೆಯ ಸಂಪಾದಕ ಬಿ.ಆರ್.ರಂಗಸ್ವಾಮಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಉಡುಪಿ ನಗರಸಭೆ ಪೌರಾಯುಕ್ತ ಆನಂದ ಕಳೋಲಿಕರ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ 9:30ಕ್ಕೆ ಕಪ್ಪೆಟ್ಟು ದಲಿತ ಕಾಲೋನಿಯಿಂದ ದಲಿತ ನಾಯಕ ದಯಾನಂದ ಕೆಪ್ಪೆಟ್ಟು ನೇತೃತ್ವದಲ್ಲಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಸುಂದರ್ ಕಪ್ಪೆಟ್ಟು ತಿಳಿಸಿದ್ದಾರೆ.