×
Ad

ಡಿ.22: ದತ್ತಜಯಂತಿ ಉತ್ಸವ, ಶ್ರೀ ದೇವಿಯ ರಥೋತ್ಸವ

Update: 2018-12-20 21:39 IST

ಭಟ್ಕಳ, ಡಿ. 20: ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ದತ್ತಜಯಂತಿ ಉತ್ಸವ ಹಾಗೂ ಶ್ರೀ ದೇವಿಯ ರಥೋತ್ಸವವು ಡಿ. 22 ರಂದು ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಮುಂಜಾನೆ ದೇವತಾ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ ಹವನ, ಸಂಕಲ್ಪ, ಶ್ರೀ ಗುರು ಮಂತ್ರ ಹವನ, ಶ್ರೀ ಸೂಕ್ತ ಹವನ, ಪುರುಷಸೂಕ್ತ ಹವನ ಮಹಾಪೂಜೆ, ದಿಗ್ಬಲಿ, ರಥಬಲಿ, ಶ್ರೀಧರ ಪದ್ಮಾವತಿ ದೇವರ ಶ್ರೀ ಮಚ್ಛಂದನ ರಥೋತ್ಸವ, ಸಾಮೂಹಿಕ ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆಯು ನಡೆಯಲಿದೆ. ಸಾಯಂಕಾಲ 4 ಗಂಟೆಗೆ ಪುರ ಬೀದಿಯಲ್ಲಿ ರಥೋತ್ಸವದ ಮೆರವಣಿಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News