ವಾಹನದ ಬಣ್ಣ ಬದಲಾಯಿಸಿ ದನ ಕಳವಿಗೆ ಯತ್ನ
Update: 2018-12-20 22:05 IST
ಕುಂದಾಪುರ, ಡಿ.20: ಕುಂದಾಪುರ ಕುಬೇರ ಹೋಟೆಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿ.19ರಂದು ಮಧ್ಯಾಹ್ನ ವೇಳೆ ದನ ಕಳವಿಗೆ ಯತ್ನಿಸುತ್ತಿದ್ದ ದುಷ್ಕರ್ಮಿಗಳು, ಪೊಲೀಸ್ ದಾಳಿ ಸಂದರ್ಭ ವಾಹನ ಹಾಗೂ ಜಾನುವಾರು ಗಳನ್ನು ಬಿಟ್ಟು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.
ಆರು ಮಂದಿ ಆರೋಪಿಗಳು ಸ್ಕಾರ್ಪಿಯೋ ವಾಹನಕ್ಕೆ ದನವನ್ನು ತುಂಬಿಸುತ್ತಿ ದ್ದಾಗ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಆರೋಪಿಗಳು ವಾಹನ ಹಾಗೂ ದನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಕಳವು ಮಾಡಲು ಯತ್ನಿಸಿದ ದನವು ಕೂಡ ಓಡಿ ಹೋಗಿದೆ.
ಬೂದು ಬಣ್ಣದ ಕಾರಿಗೆ ಕೆಂಪುಬಣ್ಣದ ಸ್ಟಿಕ್ಕರ್ ಅಂಟಿಸಿರುವುದು ಕಂಡು ಬಂದಿದ್ದು, ಕಾರಿನಲ್ಲಿ ಟಾರ್ಪಲ್, ಚೂರಿ, ನೈಲಾನ್ ಹಗ್ಗದ ಕಟ್ಟುಗಳು, ಮರದ ಮಣೆ, ಮಂಕಿ ಕ್ಯಾಪ್‌ಗಳು, 2 ನಂಬರ್ ಪ್ಲೇಟ್ಗಳು ಪತ್ತೆಯಾಗಿವೆ. ಈ ವಾಹನ ಮಾಲಕನನ್ನು ಕುರೈಸಾ ಪಡುಗ್ರಾಮ ಬಂಟ್ವಾಳ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.