×
Ad

ಎಐಸಿ ಬೋಳಿಯಾರ್ ವತಿಯಿಂದ 'ಪ್ರವಾದಿ ಜೀವನ ಸಂದೇಶ'

Update: 2018-12-21 15:26 IST

ಬಂಟ್ವಾಳ, ಡಿ. 21: ಆಧುನಿಕ ಕಾಲದ ಯುವ ಜನತೆ ಪ್ರವಾದಿ ಅವರ ಜೀವನ ಮತ್ತು ಸಂದೇಶವನ್ನು ಗಾಳಿಗೆ ತೂರಿ ಪರಸ್ಪರ ಸಂಘಟನೆಯ ಹೆಸರು ಹೇಳಿ ಮುಸ್ಲಿಂ ಸಮುದಾಯದ ನಡುವೆ ಗೊಂದಲ ಸೃಷ್ಟಿಸುತ್ತಿರುವುದು ವಿಷಾದನೀಯ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕೇರಳ ರಾಜ್ಯ ಕಾರ್ಯದರ್ಶಿ ಅಲ್ ಹಾಫಿಝ್ ಶಫೀಕ್ ಅಲ್ ಖಾಸಿಮಿ ಹೇಳಿದ್ದಾರೆ.

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಬಂಟ್ವಾಳದ ವತಿಯಿಂದ ಬುಧವಾರ ರಾತ್ರಿ ಬೋಳಿಯಾರಲ್ಲಿ ನಡೆದ ಪ್ರವಾದಿ ಜೀವನ ಮತ್ತು ಸಂದೇಶ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ದಾರಿಮಿ ಕಿನ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಪೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪಿಎಫ್‍ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್, ರಂತಡ್ಕ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಎಸ್. ಅಬ್ದುಲ್ ಖಾದರ್, ಕಾರ್ಯದರ್ಶಿ ಆರ್.ಎಸ್. ಇಬ್ರಾಹಿಂ, ಬೋಳಿಯಾರ್ ಮುಹಿಯುದ್ದೀನ್ ಜುಮಾ ಮಸೀದಿ ಕಾರ್ಯದರ್ಶಿ ಮುಹಮ್ಮದ್ ಯೂಸುಫ್, ಸಜಿಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ನಾಸಿರ್ ಸಜಿಪ, ಅನುಗ್ರಹ ಸುಪಾರಿ ಟ್ರೇಡರ್ಸ್‍ನ ಮಾಲಕ ಮುಹಮ್ಮದ್ ಶಾಫಿ, ಬೋಳಿಯಾರ್ ಕಾಂಗ್ರೆಸ್ ವಲಯ ಸಮಿತಿ ಅಧ್ಯಕ್ಷ ಬಿ.ಎಂ. ಉಸ್ಮಾನ್, ಪಿಎಫ್‍ಐ ಮೆಲ್ಕಾರ್ ವಲಯ ಸಮಿತಿ ಅಧ್ಯಕ್ಷ ಹನೀಫ್ ಬೋಳಿಯಾರ್, ಬದ್ರುದ್ದೀನ್, ಎಸ್‍ಡಿಪಿಐ ರಂತಡ್ಕ ಘಟಕದ ಅಧ್ಯಕ್ಷ ಮುಹಮ್ಮದ್ ಶರೀಫ್, ಬೋಳಿಯಾರ್ ಮುಸ್ಲಿಂ ಯಂಗ್ ಫ್ರೆಂಡ್ಸ್ ಅಧ್ಯಕ್ಷ ಎಚ್. ಬುನಿಯಮ್ ಮೊದಲಾದವರು ಉಪಸ್ಥಿತರಿದ್ದರು.

ಹನೀಫ್ ಬೋಳಿಯಾರ್ ಸ್ವಾಗತಿಸಿ, ಇರ್ಫಾನ್ ರಂತಡ್ಕ ವಂದಿಸಿ, ನಾಸಿರ್ ಬೋಗುಡಿ, ಝಕರಿಯಾ, ಮಾಲಿಕ್ ಕೊಳಕೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News