×
Ad

ತಿಹಾರ್ ಜೈಲಿನಲ್ಲಿ ಪ್ರತ್ಯೇಕ ಕೋಣೆಗೆ ಕ್ರಿಶ್ಚಿಯನ್ ಮಿಶೆಲ್ ಬೇಡಿಕೆ

Update: 2018-12-21 19:13 IST

ಹೊಸದಿಲ್ಲಿ, ಡಿ.21: ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಎಂಬ ಆರೋಪದಡಿ ಬಂಧಿಸಲ್ಪಟ್ಟಿರುವ ಕ್ರಿಶ್ಚಿಯನ್ ಮಿಶೆಲ್, ತಿಹಾರ್ ಜೈಲಿನಲ್ಲಿ ತನಗೆ ಪ್ರತ್ಯೇಕ ಕೋಣೆ ಒದಗಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಯುಎಇಯಿಂದ ಗಡೀಪಾರಾಗಿದ್ದ ಮಿಶೆಲ್ ಡಿ.4ರಂದು ಭಾರತಕ್ಕೆ ಬಂದಿದ್ದರು. ಅವರನ್ನು ಸಿಬಿಐ ಕಸ್ಟಡಿಗೆ ವಹಿಸಲಾಗಿತ್ತು. ತನ್ನನ್ನು ಕಸ್ಟಡಿಯಲ್ಲಿ ಇರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈಗಾಗಲೇ ಕೈಬರಹದ ಮಾದರಿಯನ್ನು ತಾನು ನೀಡಿದ್ದು, ಹೋಲಿಕೆಗೆ ಅಗತ್ಯಬಿದ್ದರೆ ಮೂಲ ದಾಖಲೆಯನ್ನೂ ಒದಗಿಸಿದ್ದೇನೆ ಎಂದು ತಿಳಿಸಿದ್ದ ಮಿಶೆಲ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮಿಶೆಲ್ ದುಬೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದ್ದರಿಂದ ಅವರಿಗೆ ಜಾಮೀನು ನೀಡಿದರೆ ಅವರು ಭಾರತದಿಂದಲೂ ಪರಾರಿಯಾಗುವ ಸಾಧ್ಯತೆಯಿದೆ ಎಂದು ಜಾಮೀನು ಅರ್ಜಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿದೆ. ಜಾಮೀನು ಅರ್ಜಿಯ ಕುರಿತ ತೀರ್ಪನ್ನು ನ್ಯಾಯಾಲಯ ಇನ್ನಷ್ಟೇ ನೀಡಬೇಕಿದೆ. ಈ ಮಧ್ಯೆ, ತಿಹಾರ್ ಜೈಲಿನಲ್ಲಿ ತನಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಬೇಕೆಂದು ಮಿಶೆಲ್ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News