ಆಲಡ್ಕ : ಬುರ್ದಾ ಮಜ್ಲಿಸ್, ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ
ಬಂಟ್ವಾಳ, ಡಿ. 21: ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ ಅಶೈಖ್ ಅಬ್ದುಲ್ ಖಾದರ್ ಜೀಲಾನಿ (ಖ.ಸಿ.) ಅವರ 879ನೆ ಅನುಸ್ಮರಣೆ, 52ನೆ ಕುತುಬಿಯ್ಯತ್ ವಾರ್ಷಿಕ ಮಹಾಸಮ್ಮೇಳನ ಹಾಗೂ ನೂರಾನಿಯಾ ಅರಬಿಕ್ ದರ್ಸ್‍ನ 33ನೇ ವಾರ್ಷಿಕ ಸಮ್ಮೇಳನದ ಪ್ರಯುಕ್ತ ನೂರಾನಿಯಾ ಅರಬಿಕ್ ದರ್ಸ್ ವಿದ್ಯಾರ್ಥಿಗಳ ಆಶಿಕುರ್ರಸೂಲ್ ತಂಡದಿಂದ ಬುರ್ದಾ ಮಜ್ಲಿಸ್ ಹಾಗೂ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಇಲ್ಲಿನ ಮರ್‍ಹೂಂ ಶೈಖುನಾ ಕೆ.ಕೆ. ಸ್ವದಖತುಲ್ಲಾ ಮೌಲವಿ ವೇದಿಕೆಯಲ್ಲಿ ನಡೆಯಿತು.
ಮಸೀದಿ ಮುದರ್ರಿಸ್ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ತಹ್ಲೀಮುಲ್ ಇಸ್ಲಾಂ ಮದ್ರಸ ಮುಖ್ಯ ಶಿಕ್ಷಕ ಬಿ.ಎಂ. ಅಬ್ದುರ್ರಹ್ಮಾನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಅಬೂಬಕರ್ ತ್ರೀಮೆನ್ಸ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್, ಮದ್ರಸ ಅಧ್ಯಾಪಕರಾದ ಬಿ.ಕೆ. ಅಬ್ದುಲ್ ಅಝೀಝ್ ಮದನಿ, ಶಮೀರ್ ಸಖಾಫಿ, ಮುಹಮ್ಮದ್ ಮುಸ್ತಫಾ ಝುಹ್ರಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಅನ್ಸೀಪ್ ನಂದಾರ ಸ್ವಾಗತಿಸಿ, ಮದ್ರಸ ಅಧ್ಯಾಪಕ ಸಿನಾನ್ ಮದನಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಫಾಮಿದ್ ನಂದಾವರ ನೇತೃತ್ವದಲ್ಲಿ ಬುರ್ದಾ ಆಲಾಪನೆ ನಡೆಯಿತು. ವಿದ್ಯಾರ್ಥಿ ಉಮರ್ ಸ್ವಲಾಹುದ್ದೀನ್ ದೆಂಜಿಪ್ಪಾಡಿ ನಅತೇ ಶರೀಫ್ ಹಾಡಿದರು.