ಇದು ಕರಾವಳಿ ಉತ್ಸವ ಅಲ್ಲ, ಕರಾವಳಿ ಉಳಿಸಿ: ಕೃಷಿ ಭೂಮಿ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ
Update: 2018-12-21 20:21 IST
ಮಂಗಳೂರು, ಡಿ.21: ಕರಾವಳಿ ಉತ್ಸವ ಉದ್ಘಾಟನೆ ವೇದಿಕೆಯಲ್ಲಿ ಕರಾವಳಿ ಉಳಿಸಿ ಬ್ಯಾನರ್ ಹಿಡಿದು ಕೃಷಿ ಭೂಮಿ ಸಂರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದ ಘಟನೆ ನಗರದ ಉತ್ಸವ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಇದು ಕರಾವಳಿ ಉತ್ಸವ ಅಲ್ಲ, ಕರಾವಳಿ ಉಳಿಸಿ ಎಂದು ವೇದಿಕೆಯೇರಿ ಸಚಿವ ಖಾದರ್, ಸಂಗೀತ ನಿರ್ದೇಶಕ ಗುರುಕಿರಣ್, ಜಿಲ್ಲಾಧಿಕಾರಿ ಉಪಸ್ಥಿತಿ ಇರುವ ವೇದಿಕೆಯಲ್ಲಿ ಬ್ಯಾನರ್ ಹಿಡಿದು ಸುಮಾರು 20 ಮಂದಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ವಿಲಿಯಂ ಡಿಸೋಜ ಕುತ್ತೆತ್ತೂರು, ಕಾರ್ಮಿನ್ ಮತ್ತಿತರರು ಭಾಗವಹಿಸಿದ್ದರು. ಕೆಐಎಡಿಬಿ ಭೂ ಒತ್ತುವರಿ ಮುಂದಾಗಿರುವ ಹಿನ್ನೆಲೆ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಏಕಾಏಕಿ ಪ್ರತಿಭಟನೆಯಿಂದ ಅತಿಥಿಗಳು ಕಕ್ಕಾಬಿಕ್ಕಿಯಾದರು.