ಸಿಖ್ ಹತ್ಯಾಕಾಂಡ: ರಾಜೀವ್ ಗಾಂಧಿಯ ಭಾರತ ರತ್ನ ಹಿಂಪಡೆಯಿರಿ

Update: 2018-12-21 15:35 GMT

ಹೊಸದಿಲ್ಲಿ, ಡಿ. 21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 1984 ರಲ್ಲಿ ಇಂದಿರಾ ಗಾಂಧಿ ಹತ್ಯೆ ಬೆನ್ನಿಗೆ ನಡೆದ ಸಿಖ್ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅವರಿಗೆ ನೀಡಲಾಗಿರುವ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ದಿಲ್ಲಿ ವಿಧಾನಸಭೆ ಶುಕ್ರವಾರ ನಿರ್ಣಯವನ್ನು ಅಂಗೀಕರಿಸಿದೆ. 

ಆ ಹತ್ಯಾಕಾಂಡವನ್ನು ನರಮೇಧ ಎಂದು ಬಣ್ಣಿಸಿರುವ ದಿಲ್ಲಿ ವಿಧಾನಸಭೆ ಅದರ ಸಂತ್ರಸ್ತರು ಇಂದಿಗೂ ನ್ಯಾಯವನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದು, ಕೇಂದ್ರ ಗೃಹ ಸಚಿವಾಲಯಕ್ಕೆ ಈ ಬಗ್ಗೆ ದಿಲ್ಲಿ ಸರಕಾರ ಅತ್ಯಂತ ಗಂಭೀರವಾಗಿ ಪತ್ರ ಬರೆಯಬೇಕು ಎಂದು ಆಗ್ರಹಿಸಿದೆ. ರಾಜೀವ್ ಗಾಂಧಿ ಅವರಿಗೆ 1991 ರಲ್ಲಿ ಮರಣೋತ್ತರವಾಗಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ವನ್ನು ನೀಡಲಾಗಿತ್ತು. 

ಆಮ್ ಆದ್ಮಿ ಪಕ್ಷದ ಜರ್ನೈಲ್ ಸಿಂಗ್ ಅವರು ಈ ನಿರ್ಣಯವನ್ನು ಮಂಡಿಸಿದ್ದು, ಸದನವು ಅದನ್ನು ಧ್ವನಿಮತದಿಂದ ಅಂಗೀಕರಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News