×
Ad

ಉಡುಪಿ: ‘ಕೆಜಿಎಫ್’ ಟಿಕೆಟ್‌ಗಾಗಿ ಅಭಿಮಾನಿಗಳಿಂದ ಗಲಾಟೆ

Update: 2018-12-21 21:36 IST

ಉಡುಪಿ, ಡಿ.21: ನಗರದ ಅಲಂಕಾರ್ ಥಿಯೇಟರ್‌ನಲ್ಲಿ ಇಂದು ಬಿಡುಗಡೆಗೊಂಡಿರುವ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಚಲನ ಚಿತ್ರದ ಟಿಕೆಟ್‌ಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದು, ಈ ವೇಳೆ ಉಂಟಾದ ಗಲಾಟೆಯನ್ನು ಪೊಲೀಸು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು.

ಬೆಳಗ್ಗಿನ 10ಗಂಟೆ ಪ್ರದರ್ಶನದ ಟಿಕೆಟ್ ಬೇಗನೆ ಮುಗಿದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಒಂದು ಗಂಟೆ ಪ್ರದರ್ಶನದ ಟಿಕೆಟ್ ನೀಡುವಂತೆ ಅಭಿಮಾನಿ ಗಳು ಥಿಯೇಟರ್ ಸಿಬ್ಬಂದಿಗಳ ಜೊತೆ ಮಾತಿಗಿಳಿದರು. ಸಿಬ್ಬಂದಿಗಳು ಟಿಕೆಟ್ ನೀಡಲು ನಿರಾಕರಿಸಿದಾಗ ಅಭಿಮಾನಿಗಳು ಗಲಾಟೆ ನಡೆಸಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸರು ಅಭಿಮಾನಿಗಳನ್ನು ಸಮಾಧಾನ ಪಡಿಸಿದರು. ಬಳಿಕ ಥಿಯೇಟರ್ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದ ಪೊಲೀಸರು, ಮಧ್ಯಾಹ್ನ ಪ್ರದರ್ಶನದ ಟಿಕೆಟ್‌ನ್ನು ಬೆಳಗ್ಗೆ 11ಗಂಟೆಯಿಂದ ನೀಡಲು ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News