×
Ad

ಶಬರಿಮಲೆ ಹಿಂಸಾಚಾರ ಪ್ರಕರಣ: ರಾಹುಲ್ ಈಶ್ವರ್‌ಗೆ ಜಾಮೀನು

Update: 2018-12-21 21:59 IST

ಕೊಚ್ಚಿ, ಡಿ.21: ಶಬರಿಮಲೆ ದೇವಸ್ಥಾನದಲ್ಲಿ ಅಕ್ಟೋಬರ್‌ನಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ಜಾಮೀನು ಪಡೆದು, ಬಳಿಕ ಜಾಮೀನು ಷರತ್ತು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಅಯ್ಯಪ್ಪ ಧರ್ಮ ಸೇನೆಯ ಮುಖಂಡ ರಾಹುಲ್ ಈಶ್ವರ್‌ಗೆ ಕೇರಳ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರುಗೊಳಿಸಿದೆ.

 ಜಾಮೀನು ಷರತ್ತು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಸೋಮವಾರ ಸ್ಥಳೀಯ ನ್ಯಾಯಾಲಯ ಬಂಧಿಸಿತ್ತು. ಬಳಿಕ ಅವರು ಜಾಮೀನು ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ಥಾಮಸ್, ಪ್ರಮುಖ ಯಾತ್ರಾ ಸ್ಥಳವಾಗಿರುವ ಪಂಬಾ(ಪಂಪಾ) ನಗರಕ್ಕೆ ಪ್ರವೇಶಿಸಬಾರದು ಹಾಗೂ ಪಟ್ಟಣಂಥಿಟ್ಟ ಪೊಲೀಸ್ ಠಾಣೆಯಲ್ಲಿ ತಿಂಗಳಿಗೊಮ್ಮೆ ಹಾಜರಾಗಿ ಸಹಿ ಹಾಕುವಂತೆ ಸೂಚಿಸಿ ಜಾಮೀನು ಮಂಜೂರುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News