ಕ್ರಿಸ್ಮಸ್ ಪ್ರೀತಿಯ ಸೇತುವೆ ಕಟ್ಟುವ ಹಬ್ಬ: ಫಾ.ಡೇನಿಸ್ ಡೇಸಾ

Update: 2018-12-21 16:39 GMT

ಶಿರ್ವ, ಡಿ.21: ಕ್ರಿಸ್ಮಸ್ ವಿಶಾಲ ಹೃದಯವಂತಿಕೆ, ಭ್ರಾತೃತ್ವ, ಸಾಮರಸ್ಯ, ಪ್ರೀತಿಯ ಸೇತುವೆ ಕಟ್ಟುವ ಹಬ್ಬವಾಗಿದೆ ಎಂದು ಶಿರ್ವ ಆರೋಗ್ಯಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ.ಡೆನಿಸ್ ಡೇಸಾ ಹೇಳಿದ್ದಾರೆ.

ಮುದರಂಗಡಿ ಮೈಕಲ್ ರಮೇಶ್ ಡಿಸೋಜ ನಿವಾಸದಲ್ಲಿ ಇತ್ತೀಚೆಗೆ ಶಿರ್ವ ರೋಟರಿಯ ಕ್ರೈಸ್ತ ಬಂಧುಗಳು ಸಂಯುಕ್ತವಾಗಿ ಏರ್ಪಡಿಸಲಾದ ಕ್ರಿಸ್ಮಸ್ ಸ್ನೇಹ ಸೌಹಾರ್ದ ಕೂಟ-ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಾನವ ಧರ್ಮವೇ ಶ್ರೇಷ್ಠ ಧರ್ಮವಾಗಿದ್ದು, ನೈಜತೆಗೆ ಬೆಲೆಕೊಟ್ಟು ಮೊದಲು ತನ್ನನ್ನು ತಾನು ಬದಲಾಯಿಸಿ ಕೊಂಡಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ನಾವೇ ನಮ್ಮ ಬದುಕಿನ ಶಿಲ್ಪಿಗಳು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ ಮಾತನಾಡಿದರು. ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ದೆಂದೂರು ದಯಾನಂದ ಶೆಟ್ಟಿ ವಹಿಸಿದ್ದರು. ಮೈಕಲ್ ರಮೇಶ್ ಡಿಸೋಜ ಸ್ವಾಗತಿಸಿದರು. ಮತಾಯಸ್ ಲೋೋ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗಾಯಕ ಫಿಲಿಪ್ ಕೆಸ್ತಲಿನೊ, ಜೋಯಲ್ ಮತಾಯಸ್, ವಿನೋದ್ ಮತಾಯಸ್ ಗಾಯನ ಮಂಡಳಿ ಸದಸ್ಯರು ಕ್ರಿಸ್ಮಸ್ ಗೀತೆಗಳನ್ನು ಹಾಡಿದರು. ನಿಯೋಜಿತ ರೋಟರಿ ಅಧ್ಯಕ್ಷ ಸುನಿಲ್ ಕಬ್ರಾಲ್ ಕಾರ್ಯಕ್ರಮ ಸಂಯೋಜಿಸಿ ದ್ದರು. ರೋಟರಿ ಪೂರ್ವಾಧ್ಯಕ್ಷ ಮೆಲ್ವಿನ್ ಡಿಸೋಜ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News