ಉಡುಪಿ: ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ
Update: 2018-12-21 22:12 IST
ಉಡುಪಿ, ಡಿ.21: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಗರದ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆ ಎದುರಿನ ಮಳಿಗೆಯಲ್ಲಿ ನಂದಿನಿ ‘ಸಿಹಿ ಉತ್ಸವ’ಕೆ್ಕ ಶುಕ್ರವಾರ ಚಾಲನೆ ನೀಡಲಾಯಿತು.
ಒಕ್ಕೂಟದ ಅಧ್ಯಕ್ಷ ರವಿರಾಜ್ ಕೊಡವೂರು ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಜ.9ರ ತನಕ ನಡೆಯುವ ಉತ್ಸವದಲ್ಲಿ ನಂದಿನಿ ಸಿಹಿ ಉತ್ಪನ್ನ ಖರೀದಿ ಮೇಲೆ ಶೇ.10ರ ರಿಯಾಯಿತಿ ಇದೆ ಎಂದರು.
ನಂದಿನಿ ಮೈಸೂರು ಪಾಕ್, ಕ್ಯಾಶ್ಯೂ ಬರ್ಫಿ, ಪೇಡಾ, ನಂದಿನಿ ಬೈಟ್, ಕೋಕನಟ್ ಬರ್ಫಿ, ಬೇಸನ್ ಲಾಡು ಸಹಿತ ವಿವಿಧ ಒಕ್ಕೂಟಗಳ ಸಿಹಿ ಉತ್ಪನ್ನಗಳನ್ನೂ ಮಾರಾಟ ಮಾಡಲಾಗುವುದು. ಮಳಿಗೆ ಮಾಲೀಕ ಪ್ರಭಾತ್ ಕೊಡವೂರು, ಒಕ್ಕೂಟದ ಉಪ ವ್ಯವಸ್ಥಾಪಕರಾದ ಲಕ್ಕಪ್ಪ, ಮುನಿರತ್ನಮ್ಮ, ಸಹಾಯಕ ವ್ಯವಸ್ಥಾಪಕ ಶ್ಯಾಮಸುಂದರ್ ಉಪಸ್ಥಿತರಿದ್ದರು.