×
Ad

ನವಾಡಾ ಅತ್ಯಾಚಾರ ಪ್ರಕರಣ: ಬಿಹಾರದ ಶಾಸಕ ರಾಜ್‌ಬಲ್ಲಭ ಯಾದವ್‌ಗೆ ಜೀವಾವಧಿ ಶಿಕ್ಷೆ

Update: 2018-12-21 22:16 IST

ಪಾಟ್ನ, ಡಿ.21: ಎರಡು ವರ್ಷದ ಹಿಂದೆ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರ್‌ಜೆಡಿ ಶಾಸಕ ರಾಜ್‌ಬಲ್ಲಭ ಯಾದವ್‌ಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ 50 ಸಾವಿರ ರೂ. ದಂಡ ವಿಧಿಸಲಾಗಿದೆ.

 ಇದೇ ಪ್ರಕರಣದಲ್ಲಿ ಇತರ ಮೂವರಿಗೆ 10 ವರ್ಷದ ಕಠಿಣ ಜೈಲುಶಿಕ್ಷೆ ಹಾಗೂ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೀವಾವಧಿ ಶಿಕ್ಷೆಗೆ ಒಳಗಾದವರಿಗೆ ತಲಾ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಇತರ ಮೂವರಿಗೆ ತಲಾ 10 ಸಾವಿರ ರೂ. ದಂಡ ವಿಧಿಸಲಾಗಿದೆ.

 2016ರಲ್ಲಿ ಬಿಹಾರದ ತನ್ನ ಮನೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಹಾಗೂ ಇತರ ಐದು ಮಂದಿಯನ್ನು ನ್ಯಾಯಾಲಯ ಅಪರಾಧಿಗಳು ಎಂದು ಘೋಷಿಸಿದೆ. ಇವರಲ್ಲಿ ನಾಲ್ವರು ಮಹಿಳೆಯರು. ಶಾಸಕನನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇದರೊಂದಿಗೆ ನವಾಡ ಕ್ಷೇತ್ರದ ಶಾಸಕರಾಗಿರುವ ಯಾದವ್ ತನ್ನ ಶಾಸಕತ್ವ ಕಳೆದುಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News