×
Ad

ಹಳೆಕೋಟೆಯಲ್ಲಿ ಶಾಲಾ ವಾರ್ಷಿಕೋತ್ಸವ

Update: 2018-12-21 22:42 IST

ಉಳ್ಳಾಲ, ಡಿ. 21: ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಳ್ಳಾಲದ ಹಳೆಕೋಟೆಯಲ್ಲಿ  ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಫ್ರೌಢಶಾಲೆಯ ವಾರ್ಷಿಕೋತ್ಸವನ್ನು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‍ನ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್  ಅಧ್ಯಕ್ಷತೆಯಲ್ಲಿ ನಡೆಯಿತು. 

ಕೇಂದ್ರ ಜುಮಾ ಮಸ್ಜಿದ್‍ನ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹಾ ಬಹುಮಾನ ವಿತರಿಸಿದರು. ಉಪಾಧ್ಯಕ್ಷ ಇಸ್ಮಾಯಿಲ್ ಮೋನು  ರವಿವರ್ಮ ಚಿತ್ರ ಸಂಸ್ಥೆ ಮತ್ತು ಪ್ರಗತಿ ಪರ ಸೇವಾ ಸಂಸ್ಥೆಯ  ಸ್ಪರ್ಧಾ ಬಹುಮಾನಗಳನ್ನು ವಿತರಿಸಿದರು. ಜೀವ ವಿಮಾ ಸಂಸ್ಥೆಯವರು ವಿದ್ಯಾರ್ಥಿಗಳ ಕಲಿಕೆಗಾಗಿ ನೀಡಿದ ಬಹುಮಾನಗಳನ್ನು  ಕ್ಷೇತ್ರ ಸಮನ್ವಯಾಧಿಕಾರಿ ಡಾ.ಪ್ರಶಾಂತ್  ವಿತರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‍ನ ಉಪಾಧ್ಯಕ್ಷ ಮೋನು ಇಸ್ಮಾಯಿಲ್‍  ರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಶಿಕ್ಷಣಾಧಿಕಾರಿ ಜ್ಞಾನೇಶ್, ಉಳ್ಳಾಲ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟಿನ ಉಪಾಧ್ಯಕ್ಷರುಗಳಾದ  ಮುಸ್ತಫಾ ಅಬ್ದುಲ್ಲಾ  ಮತ್ತು  ಯು. ಕೆ. ಇಬ್ರಾಹಿಂ ತೂಬಾ ಫರ್ನೀಚರ್ ಮಾಲಕ ಹಮ್ಮಬ್ಬ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯು. ಎನ್. ಇಬ್ರಾಹಿಂ ಶಾಲಾ ಸಂಚಾಲಕ ಮುಹಮ್ಮದ್ ಇಸ್ಮಾಯಿಲ್ ಹಾಜಬ್ಬ, ಆಡಳಿತಾಧಿಕಾರಿ ಅಬ್ದುಲ್ ಲತೀಫ್ ,ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳೂರು ದಕ್ಷಿಣ ವಲಯ ಅಧ್ಯಕ್ಷ ಎಂ.ಎಚ್.ಮಲಾರ್ ದೈಹಿಕ ಶಿಕ್ಷಣ ಸಂಯೋಜಕ ವಿಷ್ಣು ಹೆಬ್ಬಾರ್ , ಸಿಆರ್‍ಪಿ ನಳಿನಿ ಶಾಲಾಭಿವೃಧ್ಧಿ ಸಮಿತಿ ಸದಸ್ಯರುಗಳಾದ ಎಂ. ಹೆಚ್. ಇಬ್ರಾಹಿಂ ,ಫಾರೂಕ್ ಯು. ಹೆಚ್ , ಹಾಜಿ ಝೈನುದ್ದೀನ್ ,ಮಹಮ್ಮದ್ ಮೇಸ್ತ್ರಿ , ಅಲ್ತಾಫ್ ಯು.ಹೆಚ್ , ಹಝ್ರತ್ ಶಾಲಾ ಮುಖ್ಯ ಶಿಕ್ಷಕಿ ನಸೀಮಾ, ಪ್ರತಿಭಾರವರು  ಉಪಸ್ಥಿತರಿದ್ದರು .

ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿದರು .ಶಿಕ್ಷಕಿ ಸೌಮ್ಯ ವಂದಿಸಿದರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ರಫೀಕ್  ಹಮೀದ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಸಪ್ನಾ , ಶಿಕ್ಷಕಿ ಶಕೀಲಾ ವಿಜೇತರ ವಿವರಗಳನ್ನು ವಾಚಿಸಿದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News