×
Ad

ಕ್ಷುಲ್ಲಕ ಕಾರಣ: ಅಂಗಡಿಗೆ ನುಗ್ಗಿ ಮಾಲಕನಿಗೆ ಹಲ್ಲೆ

Update: 2018-12-21 23:01 IST

ಬಂಟ್ವಾಳ, ಡಿ. 21: ಕ್ಷುಲ್ಲಕ ಕಾರಣಕ್ಕೆ ತಂಡವೊಂದು ಅಂಗಡಿಗೆ ನುಗ್ಗಿ ಮಾಲಕನಿಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ವಿಟ್ಲದ ಕಾಶಿಮಠ ಎಂಬಲ್ಲಿ ಶುಕ್ರವಾರ ನಡೆದಿದೆ.

ವಿಟ್ಲ ಕಸಬಾ ಗ್ರಾಮದ ಕಬ್ಬಿನಹಿತ್ತಿಲು ನಿವಾಸಿ ನವನೀತ ಶೆಣೈ (40) ಹಲ್ಲೆಗೊಳಗಾದ ಅಂಗಡಿ ಮಾಲಕ. ನವನೀತ ಕಾಶಿಮಠ ಎಂಬಲ್ಲಿರುವ ಕಾಂಪ್ಲೆಕ್ಸ್‍ನಲ್ಲಿ ಬೇಕರಿ ಹಾಗೂ ಜ್ಯೂಸ್ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದ್ದು, ಶುಕ್ರವಾರ ಮಧ್ಯಾಹ್ನ ಅಂಗಡಿಗೆ ಬಂದ ತಂಡವೊಂದು ಚಿಲ್ಲರೆ ಬಾಕಿ ಇರುವ ಬಗ್ಗೆ ನೆಪವೊಡ್ಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News