ಡಿ.23, 24: ಕರಾವಳಿ ಉತ್ಸವದ ಕಾರ್ಯಕ್ರಮ

Update: 2018-12-22 12:02 GMT

ಮಂಗಳೂರು, ಡಿ.22: ಕರಾವಳಿ ಉತ್ಸವದ ಅಂಗವಾಗಿ ಕದ್ರಿ ಉದ್ಯಾನವನದಲ್ಲಿ ಡಿ.23ರಂದು ಬೆಳಗ್ಗೆ 6ರಿಂದ 7:30ರವರೆಗೆ ವಿದುಷಿ ಸತ್ಯವತಿ ಮುಡಂಬಡಿತ್ತಾಯ ಶಿಷ್ಯೆಯರಿಂದ ಉದಯರಾಗ ಕರ್ನಾಟಕೀ ಶಾಸ್ತ್ರೀಯ ಗಾಯನ, ಬೆಳಗ್ಗೆ 7:30ರಿಂದ 8.15ರವರೆಗೆ ಅವಿಷ್ಕಾರ ಯೋಗ ಮಂಗಳೂರು, ಕುಶಾಲಪ್ಪಗೌಡ ಮತ್ತು ತಂಡದಿಂದ ಯೋಗ ಪ್ರಾತ್ಯಕ್ಷಿಕೆ, ಸಂಜೆ 6ರಿಂದ 7:30ರವರಗೆ ಹುಬ್ಬಳ್ಳಿ, ಪಂ.ಜಯತೀರ್ಥ ಮೇವುಂಡಿ ಮತ್ತು ತಂಡದಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ಸಂತವಾಣಿ ಸಂಜೆ 7:30ರಿಂದ 9:15 ಬೆಂಗಳೂರು, ಮೆಲೋ ಟ್ರೀ ಫ್ಯೂಶನ್ ಮ್ಯೂಸಿಕ್ ಅವರಿಂದ ಫ್ಯೂಶನ್ ಮ್ಯೂಸಿಕ್ ಕಾರ್ಯಕ್ರಮ ನಡೆಯಲಿದೆ.

ಡಿ.24ರಂದು ಸಂಜೆ 6ರಿಂದ 7:15ರವರೆಗೆ ಉಡುಪಿಯ ಅರ್ಚನಾ ಮತ್ತು ಸಮನ್ವಿ ಹಾಗೂ ತಂಡದಿಂದ ಕರ್ನಾಟಕೀ ಶಾಸ್ತ್ರೀಯ ದ್ವಂದ್ವ ಗಾಯನ, ಸಂಜೆ 7:15 ರಿಂದ 9:15ರವರೆಗೆ ಬೆಂಗಳೂರಿನ ಡಾ.ಸಂಜಯ್ ಶಾಂತರಾಮ್ ಶಿವಪ್ರಿಯ ತಂಡದಿಂದ ನೃತ್ಯ ರೂಪಕ, ಕರ್ನಾಟಕ ಕ್ಷೇತ್ರ ವೈಭವ ನಡೆಯಲಿದೆ.
ಕರಾವಳಿ ಉತ್ಸವ ಮೈದಾನದ ವಸ್ತು ಪ್ರದರ್ಶನ ವೇದಿಕೆಯಲ್ಲಿ ಡಿ.23ರಂದು ಸಂಜೆ 6ರಿಂದ 7ರವರಗೆ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದಿಂದ ಕವಿಗೋಷ್ಠಿ, ಸಂಜೆ 7 ರಿಂದ 9ರವರೆಗೆ ಭರತಾಂಜಲಿ ಕೊಟ್ಟಾರ, ಪ್ರತಿಮಾ ಶ್ರೀಧರ್ ಮತ್ತು ತಂಡದಿಂದ ನೃತ್ಯ ಸಂಭ್ರಮ ನಡೆಯಲಿದೆ.

ಡಿ.24ರಂದು ಸಂಜೆ 6ರಿಂದ 7:30ರವರೆಗೆ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ರಂಗ ಗೀತೆಗಳು, ಜಾನಪದ ಗೀತೆಗಳು, ಸಂಜೆ 7:30ರಿಂದ 9:15ರವರೆಗೆ ಮಾಧ್ಯಮ ಮಿತ್ರ ವೃಂದ, ಮಂಗಳೂರು ಇವರಿಂದ ಕರಾವಳಿ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News