×
Ad

ವಜ್ರಾಭರಣಗಳ ‘ಸಂಗ್ರಹ ಪ್ರದರ್ಶನ - ಮಾರಾಟ’ ಉದ್ಘಾಟನೆ

Update: 2018-12-22 18:09 IST

ಮಂಗಳೂರು, ಡಿ.22: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯು ನಗರದ ಕಂಕನಾಡಿಯ ಶೋರೂಂನಲ್ಲಿ ಡಿ. 22ರಿಂದ ಜ. 6ರವರೆಗೆ ಆಯೋಜಿಸಿರುವ ದಕ್ಷಿಣ ಭಾರತದಲ್ಲೇ ಬೃಹತ್ ಆದ ವಜ್ರಾಭರಣಗಳ ‘ಸಂಗ್ರಹ ಪ್ರದರ್ಶನ ಮತ್ತು ಮಾರಾಟ- ವಿಶ್ವ ವಜ್ರ’ವು ಶನಿವಾರ ಉದ್ಘಾಟನೆಗೊಂಡಿತು.

ಚಿತ್ರನಟಿ ಕಾವ್ಯಾ ಶೆಟ್ಟಿ ಈ ‘ಪ್ರದರ್ಶನ ಮತ್ತು ಮಾರಾಟ’ಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವೈವಿಧ್ಯಮಯ ಸಂಗ್ರಹಗಳ ಭಂಡಾರವೇ ಇಲ್ಲಿದ್ದು, ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭ ಸಾಲಿಟೇರ್ ಕಲೆಕ್ಷನ್‌ನ್ನು ಯೆನೆಪೊಯ ಗ್ರೂಪ್‌ನ ಪ್ರತಿನಿಧಿ ಹಸೀನಾ ನೌಫಲ್ ಯೆನೆಪೊಯ, ಸಿಂಗಾಪುರ ಕಲೆಕ್ಷನ್‌ನ್ನು ಮಂಜುನಾಥ್ ರಬ್ಬರ್ ಸಂಸ್ಥೆಯ ಸಿಇಒ ಮಂಜುನಾಥ ಹೆಬ್ಬಾರ್, ಯು.ಎಸ್. ಕಲೆಕ್ಷನ್‌ನ್ನು ಡಾ. ಕವಿತಾ ಐವನ್ ಡಿಸೋಜ, ಬೆಲ್ಜಿಯಂ ಕಲೆಕ್ಷನ್‌ನ್ನು ಡಾ.ಆರೂರು ಪ್ರಸನ್ನ ರಾವ್, ಮಿಡ್ಲ್ ಈಸ್ಟ್ ಕಲೆಕ್ಷನ್‌ನ್ನು ಕ್ರೂಸ್ ರೆಸ್ಟೋರೆಂಟ್ ಮಾಲಕ ರೂಪಾ ಧರ್ಮಯ್ಯ, ಟರ್ಕಿಶ್ ಕಲೆಕ್ಷನ್‌ನ್ನು ವೆಸ್ಟರ್ನ್ ಇಂಡಿಯಾ ಪ್ಲೈವುಡ್‌ನ ಪ್ರತಿನಿಧಿ ರಾಫಿಯಾ ಕೋಯ, ಫ್ರೆಂಚ್ ಕಲೆಕ್ಷನ್‌ನ್ನು ಅಪೋಲೊ ಟಯರ್ ಪ್ರತಿನಿಧಿ ನೂರ್‌ಜಹಾನ್, ಪೋಲ್ಕಿ ಕಲೆಕ್ಷನ್‌ನ್ನು ಓಡ್ನಿ ಬೂಟಿಕ್‌ನ ಮಾಲಕ ಶರ್ವತ್ ಸಾಜಿದ್ ಹಾಗೂ ಅಟ್ಟೀರ್ ಫ್ರೊಫೆಶನಲ್ ವೇರ್‌ನ್ನು ಫಾತಿಮಾ ಫರ್ವಿನ್ ಅಹ್ಮದ್ ಉದ್ಘಾಟಿಸಿ ಶುಭ ಹಾರೈಸಿದರು.  ಕಾರ್ಯನಿರ್ವಾಹಕ‌ ನಿರ್ದೇಶಕ ಟಿ.ಎಂ. ಅಬ್ದುಲ್ ರಹೀಂ ಅವರ ಪತ್ನಿ ತಹ್ ಸೀನ್ ಸ್ವಾಗತಿಸಿದರು. ಅನುಶಾ ಕಾರ್ಯಕ್ರಮ ನಿರೂಪಿಸಿದರು.

ಪ್ರದರ್ಶನವು 10,000 ಕ್ಯಾರೆಟ್‌ನ ಐಜಿಐ ಪ್ರಮಾಣೀಕೃತ ಇಟಲಿ, ಫ್ರಾನ್ಸ್, ಟರ್ಕಿ, ಬೆಲ್ಜಿಯಂ, ಯುಎಸ್, ಸಿಂಗಾಪುರ, ಮಧ್ಯಪ್ರಾಚ್ಯದ ಸಾಲಿಟೇರ್ ವಿಶೇಷ ಸಂಗ್ರಹಗಳನ್ನು ಹೊಂದಿದೆ.

ಕಳೆದ 6 ವರ್ಷಗಳಿಂದ ಸುಲ್ತಾನ್ ಸಮೂಹ ಸಂಸ್ಥೆಗಳ ವತಿಯಿಂದ ಗ್ರಾಹಕರಿಗಾಗಿ ಈ ರೀತಿ ಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದು ಸುಲ್ತಾನ್ ಗ್ರೂಪ್‌ನ ಎಂ.ಡಿ. ಡಾ. ಟಿ.ಎಂ.ಅಬ್ದುಲ್ ರವೂಫ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ.ಅಬ್ದುಲ್‌ ರಹೀಂ ತಿಳಿಸಿದ್ದಾರೆ.

ಮುಂಬೈಯ ಐಐಜಿಎಸ್ ಆಭರಣಗಳ ಶೋನಲ್ಲಿ ಪ್ರದರ್ಶನಗೊಂಡಿರುವ ನೂತನ ಆಭರಣಗಳ ಬೃಹತ್ ಸಂಗ್ರಹವು ಇಲ್ಲಿದೆ. ಈ ಸಂದರ್ಭ ಖರೀದಿಸುವ ಗ್ರಾಹಕರಿಗೆ 8,000 ರೂ.ಮೊತ್ತದ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News