×
Ad

ಮಂಗಳೂರು ವೆಲ್‌ಫೇರ್ ಅಸೋಸಿಯೇಶನ್ ನಿಂದ ಸಚಿವ ಖಾದರ್ ಭೇಟಿ

Update: 2018-12-22 19:31 IST

ಮಂಗಳೂರು, ಡಿ. 22: ಮಂಗಳೂರು ವೆಲ್‌ಫೇರ್ ಅಸೋಸಿಯೇಶನ್ (ಶಾದಿಮಹಲ್) ಬೋಳಾರ ಇದರ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಬೊಳಾರದಲ್ಲಿ ಹೊಸ ಶಾದಿಮಹಲ್ ನಿರ್ಮಿಸಲು ಸಹಾಯಕ್ಕಾಗಿ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಚಿವ ಯು.ಟಿ. ಖಾದರ್ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಮಂಜೂರು ಮಾಡಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಸಮಿತಿಯ ಸದಸ್ಯರಾದ ಝಮೀರ್ ಅಂಬರ್ ಅವರ ಮನೆಗೆ ಸಚಿವ ಖಾದರ್ ಭೇಟಿ ನೀಡಿದ ಸಂದರ್ಭ ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಸಂಘಟನೆಯ ಅಧ್ಯಕ್ಷ ಯೂಸುಫ್ ಖಾದರ್ ಮತ್ತು ಸದಸ್ಯರಾದ ಮಹಫೂಝುರ್ರಹ್ಮಾನ್, ಎಂ.ಐ. ಖಲೀಲ್, ಮಕ್ಬೂಲ್ ಅಹ್ಮದ್, ಶೌಕತ್ ಹುಸೈನ್, ಝಾಹಿದ್ ಎಂ.ಎಸ್, ಆಸಿಫ್ ಶರ್ಫುದ್ದೀನ್, ಝಹೀರ್ ಅಹ್ಮದ್, ಅಬ್ದುಲ್ ರವೂಫ್ ಪುತ್ತಿಗೆ, ಇಕ್ಬಾಲ್ ಅಂಬರ್ ಮತ್ತು ಅಝೀಮ್ ಎಂ.ಎಂ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News