×
Ad

ರಾಷ್ಟ್ರಪತಿ ಭೇಟಿ: ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

Update: 2018-12-22 21:48 IST

ಉಡುಪಿ, ಡಿ.22: ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿ.27ರಂದು ಉಡುಪಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 4ರವರೆಗೆ ಈ ಕೆಳಗೆ ನಮೂದಿಸಿದ ಸ್ಥಳಗಳಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

ಮಲ್ಪೆ, ಕಲ್ಮಾಡಿ ಕಡೆಯಿಂದ ಬರುವ ವಾಹನಗಳು ಕಲ್ಮಾಡಿ ಜಂಕ್ಷನ್‌ನಿಂದ ಕಿದಿಯೂರು ಜಂಕ್ಷನ್ ಮಾರ್ಗವಾಗಿ ಅಂಬಲಪಾಡಿ ಸ್ವಾಗತ ಗೋಪುರ, ಜೋಡುಕಟ್ಟೆ ಮಾರ್ಗವಾಗಿ ಉಡುಪಿ ನಗರಕ್ಕೆ ಬರಬೇಕು.

ಕುಂದಾಪುರ, ಬ್ರಹ್ಮಾವರ, ಸಂತೆಕಟ್ಟೆ ಕಡೆಯಿಂದ ಉಡುಪಿಗೆ ಬರುವ ವಾಹನಗಳು ಅಂಬಾಗಿಲಿನಿಂದ ಬಂದು ರಸಿಕ ಬಾರ್ ಜಂಕ್ಷನ್ ಮುಖೇನ ದೊಡ್ಡಣಗುಡ್ಡೆ, ಮನೋಳಿಗುಜ್ಜಿ, ಲಾ-ಕಾಲೇಜ್ ಜಂಕ್ಷನ್, ಎಸ್.ಎಂ.ಕೆ ಜಂಕ್ಷನ್, ಬೀಡನಗುಡ್ಡೆ ಮಾರ್ಗವಾಗಿ ನಗರಕ್ಕೆ ಬರಬೇಕು.ಕಾರ್ಕಳ, ಹಿರಿಯಡ್ಕ, ಮಣಿಪಾಲ ಕಡೆಯಿಂದ ಬರುವ ವಾಹನಗಳು ಎಸ್‌ಕೆಎಂ ಜಂಕ್ಷನ್, ಬೀಡನ ಗುಡ್ಡೆ, ಮಿಷನ್ ಕಂಪೌಂಡ್ ಮಾರ್ಗವಾಗಿ ನಗರಕ್ಕೆ ಬರಬೇಕು. ನಗರದಿಂದ ಮಲ್ಪೆ ಕಡೆಗೆ ಹೋಗುವ ವಾಹನಗಳು ಜೋಡುಕಟ್ಟೆ, ಕಿನ್ನಿಮುಲ್ಕಿ, ಅಂಬಲಪಾಡಿ-ಕಿದಿಯೂರು ಕಲ್ಮಾಡಿ ಮಾರ್ಗವಾಗಿ ಮಲ್ಪೆಗೆ ಹೋಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News