ಲಾರಿ ಢಿಕ್ಕಿ: ಬೈಕ್ ಸವಾರ ಮೃತ್ಯು
ಕೋಟ, ಡಿ.22: ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಚಿತ್ರಪಾಡಿ ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನ ಹತ್ತಿರ ಡಿ.22ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದ ಸಮೀಪದ ನಿವಾಸಿ ಕೆ.ಬಿ.ರಾಜು ಎಂಬವರ ಮಗ ವರುಣ್ ಮೊಗವೀರ (33) ಎಂದು ಗುರುತಿಸ ಲಾಗಿದೆ. ಇವರ ಬೈಕ್‌ಗೆ ಕುಂದಾಪುರದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿಯು ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ಬೈಕ್ ಮುಂದೆ ಹೋಗುತ್ತಿದ್ದ ರೋಡ್ ರೋಲರ್‌ಗೆ ತಾಗಿ ರಸ್ತೆಗೆ ಬಿತ್ತೆನ್ನಲಾಗಿದೆ. ಈ ವೇಳೆ ವರುಣ್ ಮೇಲೆ ಲಾರಿ ಚಲಿಸಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ವರುಣ್ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ. ಇವರಿಗೆ ಕಾಳಾವರದ ಯುವತಿಯೊಂದಿಗೆ ಡಿ.30ರಂದು ಸಾಲಿಗ್ರಾಮ ಸಭಾಂಗಣದಲ್ಲಿ ಮದುವೆ ನಿಶ್ಚಯವಾಗಿತ್ತೆನ್ನಲಾಗಿದೆ.
ಗಲ್ಫ್ ದೇಶ ದಲ್ಲಿ ದುಡಿಯುತ್ತಿದ್ದ ಇವರು ಮದುವೆ ಹಿನ್ನೆಲೆಯಲ್ಲಿ ಇತ್ತೀಗಷ್ಟೆ ಊರಿಗೆ ಬಂದಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.