×
Ad

ಪೋರ್ಟ್ ವಾರ್ಡ್ ಫ್ರೆಂಡ್ಸ್‌ನಿಂದ ಸೌಹಾರ್ದ ಕ್ರಿಸ್ಮಸ್ ಸಂಗಮ

Update: 2018-12-22 22:51 IST

ಮಂಗಳೂರು, ಡಿ.22: ಪೋರ್ಟ್ ವಾರ್ಡ್ ಫ್ರೆಂಡ್ಸ್ ವತಿಯಿಂದ ಸೌಹಾರ್ದ ಕ್ರಿಸ್ಮಸ್ ಸಂಗಮ ಕಾರ್ಯಕ್ರಮವು ನಗರದ ಫಾರಂ ಫಿಝಾ ಮಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸೌಹಾರ್ದ ಬಗ್ಗೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಬಿ.ಎಲ್.ಗಣೇಶ್ ಭಟ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಇಸಾಕ್ ಪುತ್ತೂರು, ರೊಸಾರಿಯೋ ಚರ್ಚ್ ಧರ್ಮಗುರು ರೆ.ಫಾ.ಜೆ.ಬಿ ಕ್ರಾಸ್ತ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಸ್ಥಳೀಯ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಮಂಜುಳಾ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ, ಸಾಮಾಜಿಕ ಕಾರ್ಯಕರ್ತ ಜಿ.ಹನುಮಂತ್ ಕಾಮತ್, ದಲಿತ ಸಮುದಾಯ ನಾಯಕ ಪಿ.ಕೇಶವ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ರೊಸಾರಿಯೋ ಚರ್ಚ್ ಸಮಿತಿ ಹಾಗೂ ಸಂತ ಆ್ಯನ್ಸ್ ಭಗನಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸೌಹಾರ್ದ ಸಂಕೇತವಾಗಿ ಕೇಕ್ ಹಂಚಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News