×
Ad

ತೊಕ್ಕೊಟ್ಟು: ಶೆಫರ್ಡ್ ಸ್ಮಾಶರ್ಸ್ ವತಿಯಿಂದ ಬ್ಯಾಡ್ಮಿಂಟನ್ ಪಂದ್ಯಾಕೂಟ

Update: 2018-12-22 23:17 IST

ಮಂಗಳೂರು, ಡಿ. 22: ತೊಕ್ಕೊಟ್ಟಿನ ಕಾಪಿಕಾಡ್ ನಲ್ಲಿರುವ ಶಿಫಾರ್ಡ್ ಬ್ಯಾಡ್ಮಿಂಟನ್ ಕ್ಲಬ್ ನಲ್ಲಿ ಆಯ್ದ ತಂಡಗಳ ಬ್ಯಾಡ್ಮಿಂಟನ್ ಪಂದ್ಯಾಕೂಟ ‘ಶಿಫಾರ್ಡ್ ಐಕಾನ್ ಕಪ್ – 2018’ ಇತ್ತೀಚೆಗೆ ನಡೆಯಿತು.

ಈ ಪಂದ್ಯಾಕೂಟನ್ನು ಶೆಫರ್ಡ್ ಸ್ಮಾಶರ್ಸ್ ಆಯೋಜಿಸಿದ್ದು, ಪಂದ್ಯಾಕೂಟದಲ್ಲಿ ಮೆನ್ಸ್ ಓಪನ್, 35 ಕೆಟಗರಿ, 45 ಕೆಟಗರಿಯಲ್ಲಿ ಪಂದ್ಯಗಳು ನಡೆದವು.

ಮೆನ್ಸ್ ಓಪನ್ ನಲ್ಲಿ  ವಿಮಲೇಶ್ ಮತ್ತು ಶಭಿ ಅಕ್ತರ್ ಅವರು ಜಯಿಸಿದರು. ರಯೀಶ್ ಮತ್ತು ಸಫ್ವಾನ್ ಸುಳ್ಯ ದ್ವಿತೀಯ ಸ್ಥಾನ ಪಡೆದರು. ಸುಜಾನ್ ಮತ್ತು ಮಹೇಶ್ ಸುಳ್ಯ ತೃತೀಯ ಸ್ಥಾನಗಳಿಸಿದರು.

35+ ಕೆಟಗರಿಯಲ್ಲಿ ರಿಝ್ವಾನ್ ಸುಳ್ಯ ಮತ್ತು ಸಾಲಿತ್ ಪ್ರಥಮ ಸ್ಥಾನ ಗಳಿಸಿದರು. ಸಮೀರುದ್ದೀನ್ ಪುತ್ತೂರು ಮತ್ತು ಚಂದ್ರಶೇಖರ್ ದ್ವಿತೀಯ ಹಾಗು ರಹ್ಮತ್ ಮತ್ತು ಕಲೀಲ್ ರಹ್ಮಾನ್ ತೃತೀಯ ಸ್ಥಾನ ಪಡೆದುಕೊಂಡರು.

45+ ಕೆಟಗರಿಯಲ್ಲಿ ಅಶೋಕ್ ಮತ್ತು ಸಂಜಯ್ ಆರ್.ಎಂ. ಪ್ರಥಮ, ಶಫೀಕ್ ಮತ್ತು ಪ್ರಭಾತ್ ಮೂಡುಬಿದಿರೆ ದ್ವಿತೀಯ ಹಾಗು ರಿಯಾಝ್ ಮತ್ತು ವಾಸುದೇವ ಹೆಬ್ಬಾರ್ ತೃತೀಯ ಸ್ಥಾನ ಪಡೆದುಕೊಂಡರು.

ವಿಜೇತರಿಗೆ ಕೆ.ಸಿ.ನಾರಾಯಣ್, ಯು. ಅಸ್ಲಾಮ್ ಶೆಫರ್ಡ್ ಅವರು ಬಹುಮಾನ ವಿತರಣೆ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News