×
Ad

ಕೆ.ಸಿ.ರೋಡ್: ಫಲಾಹ್ ಶಿಕ್ಷಣ ಸಂಸ್ಥೆಗೆ ನುಗ್ಗಿದ ದುಷ್ಕರ್ಮಿಗಳು; ನಗದು ಕಳವು

Update: 2018-12-23 10:48 IST

ಉಳ್ಳಾಲ, ಡಿ. 23: ಕೆ.ಸಿ. ರೋಡ್ ಫಲಾಹ್ ಶಿಕ್ಷಣ ಸಂಸ್ಥೆಯ ತರಗತಿ ಬೀಗ ಒಡೆದ ದುಷ್ಕರ್ಮಿಗಳು ಸುಮಾರು 81 ಸಾವಿರ ರೂ. ನಗದು ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಮುಖ್ಯೋಪಾಧ್ಯಾಯಿನಿ ಸಬೀನಾ ಕೈಸರ್ ಅವರ  6 ಸಾವಿರ ರೂ. ನಗದು, ವಿದ್ಯಾರ್ಥಿಗಳ ಪ್ರವಾಸದ 75 ಸಾವಿರ ರೂ. ನಗದನ್ನು ದುಷ್ಕರ್ಮಿಗಳು ದೋಚಿದ್ದಾರೆ ಎಂದು ತಿಳಿದುಬಂದಿದೆ.

ಶಾಲೆಯಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಗಾಂಜಾ ಮಾಫಿಯಾದ ವಿರುದ್ಧ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮಾತನಾಡಿದ್ದಾರೆನ್ನಲಾಗಿದ್ದು, ಶಾಲಾಡಳಿತದ ವಿರುದ್ಧ ಪ್ರತೀಕಾರಕ್ಕಾಗಿ ನಗದು ದೋಚಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಉಳ್ಳಾಲ ಠಾಣೆ ಪೊಲೀಸರು ವಿದ್ಯಾಸಂಸ್ಥೆಗೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News