ಇಂಡೋನೇಷ್ಯಾದಲ್ಲಿ ಸುನಾಮಿ: ಮೃತರ ಸಂಖ್ಯೆ 168ಕ್ಕೇರಿಕೆ

Update: 2018-12-23 07:48 GMT

ಜಕಾರ್ತ, ಡಿ.23: ಜ್ವಾಲಾಮುಖಿ ಸ್ಫೋಟದ ನಂತರ ಸಂಭವಿಸಿದ ಸುನಾಮಿಯಲ್ಲಿ ಇದುವರೆಗೆ 168 ಮೃತಪಟ್ಟಿದ್ದಾರೆ. ಇಂಡೋನೇಷ್ಯಾದಲ್ಲಿ ಸುಂದಾ ಎಂಬಲ್ಲಿ ಸುನಾಮಿ ಅಪ್ಪಳಿಸಿದೆ.

ಅಲೆಗಳ ಅಬ್ಬರಕ್ಕೆ ನೂರಾರು ಕಟ್ಟಡಗಳು ನೆಲಕ್ಕುರುಳಿವೆ. 168 ಮಂದಿ ಮೃತಪಟ್ಟಿರುವುದು ಖಚಿತಗೊಂಡಿದ್ದು, 745 ಮಂದಿ ಗಾಯಗೊಂಡಿದ್ದಾರೆ. 30 ಜನರು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಏಜೆನ್ಸಿ ವಕ್ತಾರ ಸುಟೋಪೊ ಪುರ್ವೋ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News