ಸಿಬಿಎಸ್ ಇ 10, 12ನೆ ತರಗತಿ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

Update: 2018-12-23 14:36 GMT

ಹೊಸದಿಲ್ಲಿ, ಡಿ.23: 10 ಮತ್ತು 12ನೆ ತರಗತಿಯ ಬೋರ್ಡ್ ಪರೀಕ್ಷೆ ವೇಳಾಪಟ್ಟಿಗಳನ್ನು ಸಿಬಿಎಸ್ ಇ ಪ್ರಕಟಿಸಿದೆ. 12ನೆ ತರಗತಿ ಪರೀಕ್ಷೆ ಫೆಬ್ರವರಿ 15ರಿಂದ ಎಪ್ರಿಲ್ 3ರವರೆಗೆ ಹಾಗು 10ನೆ ತರಗತಿ ಪರೀಕ್ಷೆ ಫೆಬ್ರವರಿ 21ರಿಂದ ಮಾರ್ಚ್ 29ರವರೆಗೆ ನಡೆಯಲಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ಮಾಡಲು ಅನುಕೂಲವಾಗುವ ಸಲುವಾಗಿ ಪರೀಕ್ಷಾ ದಿನಾಂಕದ ವಾರಗಳ ಮೊದಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಸಿಬಿಎಸ್ ಇ 10ನೆ ತರಗತಿ ಪರೀಕ್ಷೆಯ ವೇಳಾಪಟ್ಟಿಯ ಲಿಂಕ್:  http://bit.ly/2AeJPbc

              12ನೆ ತರಗತಿ ಪರೀಕ್ಷೆಯ ವೇಳಾಪಟ್ಟಿಯ ಲಿಂಕ್:    http://bit.ly/2Acr0p5

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News