ಸತತ ಎರಡನೇ ದಿನವೂ ಇಂಧನ ಬೆಲೆಗಳ ಇಳಿಕೆ

Update: 2018-12-23 16:16 GMT

ಹೊಸದಿಲ್ಲಿ,ಡಿ.23: ದೇಶದ ನಾಲ್ಕು ಮಹಾನಗರಗಳಲ್ಲಿ ಸತತ ಎರಡನೇ ದಿನವಾದ ರವಿವಾರವೂ ಇಂಧನಗಳ ಬೆಲೆಗಳಲ್ಲಿ ಇಳಿಕೆಯಾಗಿದೆ. ಶನಿವಾರದ ಬೆಲೆಗಳಿಗೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 18ರಿಂದ 20ಪೈಸೆಗಳಷ್ಟು ಕಡಿಮೆಯಾಗಿವೆ.

ರವಿವಾರ ದಿಲ್ಲಿ,ಕೋಲ್ಕತಾ,ಮುಂಬೈ ಮತ್ತು ಚೆನ್ನೈ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆಗಳು ಪ್ರತಿ ಲೀ.ಗೆ ಅನುಕ್ರಮವಾಗಿ 70.07 ರೂ.,72.16 ರೂ.,75.69 ರೂ. ಮತ್ತು 72.70 ರೂ.ಆಗಿದ್ದರೆ ಡೀಸೆಲ್ ಬೆಲೆಗಳು ಅನುಕ್ರಮವಾಗಿ 64.01 ರೂ.,65.77 ರೂ.,66.98 ರೂ. ಮತ್ತು 67.58 ರೂ.ಆಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News