×
Ad

ಶೀಘ್ರ ಸುಳ್ಳು ಭರವಸೆ ನೀಡುವ ಅಭ್ಯರ್ಥಿಗಳು ಅನರ್ಹ?

Update: 2018-12-23 21:52 IST

ಹೊಸದಿಲ್ಲಿ,ಡಿ.23: ಸುಳ್ಳು ಘೋಷಣೆಗಳ ಸಲ್ಲಿಕೆಯನ್ನು ಅನರ್ಹತೆಗೆ ಕಾರಣವನ್ನಾಗಿಸುವುದು ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಅಭ್ಯರ್ಥಿಗಳ ವೆಚ್ಚದ ಮೇಲೆ ಮಿತಿ ಹೇರಿಕೆ ಸೇರಿದಂತೆ ಚುನಾವಣಾ ಸುಧಾರಣೆಗಳಿಗಾಗಿ ಚುನಾವಣಾ ಆಯೋಗವು ಕೇಂದ್ರ ಸರಕಾರವನ್ನು ಒತ್ತಾಯಿಸಲಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿದ ಬಳಿಕ ಶಾಸಕಾಂಗ ಕಾರ್ಯದರ್ಶಿ ಜಿ.ನಾರಾಯಣ ರಾಜು ಅವರೊಂದಿಗೆ ಆಯೋಗದ ಉದ್ದೇಶಿತ ಸಭೆಯಲ್ಲಿ ಚುನಾವಣಾ ಅವಧಿಯಲ್ಲಿ ಲಂಚಗುಳಿತನವನ್ನು ಸಂಜ್ಞೇಯ ಅಪರಾಧವಾಗಿ ಪರಿಗಣಿಸುವಂತೆಯೂ ಸರಕಾರಕ್ಕೆ ಸೂಚಿಸಲಿದೆ ಎಂದು ಚುನಾವಣಾ ಆಯೋಗದಲ್ಲಿನ ಉನ್ನತ ಮೂಲಗಳು ತಿಳಿಸಿವೆ.

ಕಾನೂನು ಸಚಿವಾಲಯವು ಚುನಾವಣಾ ಅಯೋಗಕ್ಕೆ ಆಡಳಿತಾತ್ಮಕ ಸಚಿವಾಲಯವಾಗಿದ್ದರೆ,ಶಾಸಕಾಂಗ ಇಲಾಖೆಯು ಆಯೋಗಕ್ಕೆ ಸಂಬಂಧಿಸಿದ ವಿಷಯಗಳಿಗೆ ನೋಡಲ್ ಘಟಕವಾಗಿದೆ.

ಮುಖ್ಯ ಚುನಾವಣಾ ಆಯುಕ್ತರಂತೆ ಇಬ್ಬರು ಚುನಾವಣಾ ಆಯುಕ್ತರಿಗೂ ಸಾಂವಿಧಾನಿಕ ರಕ್ಷಣೆಯನ್ನು ವಿಸ್ತರಿಸುವಂತೆಯೂ ಆಯೋಗವು ಕಾನೂನು ಸಚಿವಾಲಯವನ್ನು ಕೋರಲಿದೆ ಎಂದು ಮೂಲಗಳು ತಿಳಿಸಿದವು.

 ಸಶಸ್ತ್ರ ಪಡೆಗಳ ಸಿಬ್ಬಂದಿಗಳಿಗಾಗಿ ಮತದಾರರ ಕಾನೂನನ್ನು ಲಿಂಗ ತಟಸ್ಥವಾಗಿಸುವಂತೆಯೂ ಆಯೋಗವು ಕೋರಲಿದೆ. ಈಗ ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಪತ್ನಿಯರು ರಕ್ಷಣಾ ಪಡೆಗಳ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಅರ್ಹತೆಯನ್ನು ಹೊಂದಿದ್ದಾರೆ. ಆದರೆ ಮಹಿಳಾ ಸೇನಾ ಸಿಬ್ಬಂದಿಯ ಪತಿಗೆ ಈ ಅರ್ಹತೆಯಿಲ್ಲ. ಕಾನೂನಿನಲ್ಲಿ ‘ಪತಿ’್ನ ಎಂಬ ಶಬ್ಧದ ಬದಲಾಗಿ ‘ಪತಿ ಅಥವಾ ಪತ್ನಿ’ಎಂದು ಸೇರಿಸಲು ಉದ್ದೇಶಿಸಿರುವ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದರೂ ರಾಜ್ಯಸಭೆಯಲ್ಲಿ ಬಾಕಿಯಾಗಿದೆ.

ಸುಳ್ಳು ಘೋಷಣೆಗಳಿಗೆ ಸಂಬಂಧಿಸಿದಂತೆ ಮೂಲಗಳು,ಹಾಲಿ ಇಂತಹ ಅಪರಾಧಕ್ಕೆ ಆರು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಲಾಗುತ್ತಿದೆ. ಆದರೆ ಇದನ್ನು ಚುನಾವಣಾ ಅಪರಾಧವನ್ನಾಗಿಸಲು ಆಯೋಗವು ಬಯಸಿದೆ ಮತ್ತು ಇಂತಹ ಅಪರಾಧಗಳಲ್ಲಿ ದೋಷನಿರ್ಣಯವಾದರೆ ಅದು ಅನರ್ಹತೆಗೆ ಕಾರಣವಾಗುತ್ತದೆ ಎಂದು ವಿವರಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News