×
Ad

ಉಡುಪಿ: ಜ್ಯೋತಿರ್ವಿಜ್ಞಾನ ತರಗತಿಗಳ ಉದ್ಘಾಟನೆ

Update: 2018-12-23 22:02 IST

 ಉಡುಪಿ, ಡಿ.23: ಭಾರತೀಯ ಜ್ಯೋತಿರ್ವಿಜ್ಞಾನ ಪರಿಷತ್ತು ಹೊಸದಿಲ್ಲಿ ಇದರ ಉಡುಪಿ ಅಂಗಸಂಸ್ಥೆಯಿಂದ ಜ್ಯೋತಿರ್ವಿಜ್ಞಾನ ತರಗತಿಗಳನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ರವಿವಾರ ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಉದ್ಘಾಟಿಸಿದರು.

ಖಗೋಳ ಮತ್ತು ಭೂಗೋಳಗಳಿಗೆ ಒಂದಕ್ಕೊಂದು ಸಂಬಂಧ ಇದೆ. ಜ್ಞಾನಿ ಗಳು ಪ್ರತ್ಯಕ್ಷವಾಗಿ ಕಂಡ ಜ್ಞಾನವೇ ಜ್ಯೋತಿರ್ವಿಜ್ಞಾನ. ಇದು ಮೂಢನಂಬಿಕೆ ಯಾಗಿರದೆ ವಿಜ್ಞಾನವಾಗಿದೆ. ಜ್ಯೋತಿಶ್ಯಾಸ್ತ್ರದ ಬಗ್ಗೆ ನಮ್ಮ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತದಲ್ಲಿ ಹಲವಾರು ಕಡೆ ಉಲ್ಲೇಖವಿದೆ ಎಂದು ಪಲಿಮಾರು ಶ್ರೀಗಳು ನುಡಿದರು.

ಇದೀಗ ಉಡುಪಿಯಲ್ಲಿ ಜ್ಯೋತಿಶ್ಯಾಸ್ತ್ರದ ತರಗತಿಗಳು ಆರಂಭವಾಗಿ ರುವುದರಿಂದ ಜನಸಾಮಾನ್ಯರು ಜ್ಯೋತಿರ್ವಿಜ್ಞಾನ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ತಿಳಿಯುವಂತಾಗಲಿ ಎಂದು ಪಲಿಮಾರುಶ್ರೀಗಳು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಹೊಸದಿಲ್ಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಸ್ಟ್ರಾಲಜಿಕಲ್ ಸೈನ್ಸ್‌ನ ಅಧ್ಯಕ್ಷ ಎ.ಬಿ.ಶುಕ್ಲ, ಐಸಿಎಎಸ್ ಸಿಕಂದರಾಬಾದ್‌ನ ಕಾರ್ಯದರ್ಶಿ ಗೋಪಾಲಕೃಷ್ಣ ವಿ. ಹಾಗೂ ವಿಶೇಷ ಆಹ್ವಾನಿತರಾಗಿ ಉಡುಪಿ ಸಂಸ್ಕೃತ ವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಲಕ್ಷ್ಮೀನಾರಾಯಣ ಭಟ್, ಬಾಲಾಜಿ ರಾಘವೇಂದ್ರ ಆಚಾರ್ಯ, ಐಸಿಎಎಸ್‌ನ ರಾಷ್ಟ್ರೀಯ ಉಪಾಧ್ಯಕ್ಷ ರಾದ ಜಯರಾಮ್ ಮತ್ತು ನರಸಿಂಹ ಅಲ್ಸೆ ಮುಂತಾದವರು ಉಪಸ್ಥಿತರಿದ್ದರು.

ಡಾ. ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಉಡುಪಿ ಅಂಗ ಸಂಸ್ಥೆಯ ಕಾರ್ಯದಶಿರ್ ಮಹೇಶ್ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News