ಟರ್ಕಿ: 15ನೆ ಶತಮಾನದ ಐತಿಹಾಸಿಕ ಮಸೀದಿ ಸ್ಥಳಾಂತರ

Update: 2018-12-23 17:57 GMT

ಅಂಕಾರ, ಡಿ. 23: ಟರ್ಕಿಯಲ್ಲಿ ಅಣೆಕಟ್ಟಿನಿಂದಾಗಿ ಮುಳುಗಡೆಯಾಗಲಿರುವ ಗ್ರಾಮವೊಂದರಿಂದ 15ನೇ ಶತಮಾನದ ಮಸೀದಿಯೊಂದನ್ನು ಮೂರು ಭಾಗಗಳನ್ನಾಗಿ ಮಾಡಿ ಇನ್ನೊಂದು ಸ್ಥಳಕ್ಕೆ ಸಾಗಿಸಲಾಗಿದೆ.

ನಿರ್ಮಾಣ ಕಾರ್ಮಿಕರು 610 ವರ್ಷ ಹಳೆಯ ‘ಇಯ್ಯುಬಿ’ ಮಸೀದಿಯನ್ನು ಸಾಗಿಸಲು ಸಾಧ್ಯವಾಗುವಂತೆ ಮೂರು ಭಾಗಗಳಾಗಿ ಒಡೆದಿದ್ದಾರೆ.

 ಅದರ ಎರಡು ಭಾಗಗಳನ್ನು 300ಕ್ಕೂ ಹೆಚ್ಚಿನ ಚಕ್ರಗಳ ಬೃಹತ್ ವಾಹನಗಳಲ್ಲಿ ಈ ವರ್ಷದ ಆದಿ ಭಾಗದಲ್ಲಿ ಈಗಾಗಲೇ ಸಾಗಿಸಲಾಗಿದೆ.

ಕೊನೆಯ 2,500 ಟನ್ ಭಾರದ ಭಾಗವನ್ನು ಶುಕ್ರವಾರ ಸಾಗಿಸಲಾಯಿತು.

ಟರ್ಕಿಯ ಬಾತ್ಮನ್ ರಾಜ್ಯದಲ್ಲಿರುವ ಪ್ರಾಚೀನ ಪಟ್ಟಣ ಹಸನ್‌ಕೀಫ್‌ನಿಂದ 4,600 ಟನ್ ಭಾರದ ಮಸೀದಿಯನ್ನು ಹಸನ್‌ಕೀಫ್ ನೂತನ ಸಾಂಸ್ಕೃತಿಕ ಉದ್ಯಾನ ಕ್ಷೇತ್ರಕ್ಕೆ ಸಾಗಿಸಲಾಗಿದೆ. ಸಂರಕ್ಷಿತ ಕಟ್ಟಡಗಳ ಸಂರಕ್ಷಣೆಗಾಗಿ ಈ ಕ್ಷೇತ್ರವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಟರ್ಕಿಯ ನಾಲ್ಕನೇ ಅತಿ ದೊಡ್ಡ ಅಣೆಕಟ್ಟು ‘ಇಲಿಸು’ವಿನ ನೀರು ಈ ಪ್ರಾಚೀನ ಪಟ್ಟಣವನ್ನು ಮುಳುಗಡೆಗೊಳಿಸಲಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News