ತಾಜ್‌ಮಹಲ್‌ ಬಣ್ಣ ಬದಲಾವಣೆ ಕುರಿತು ಕೇಂದ್ರ ಸರಕಾರ ಪ್ರತಿಕ್ರಿಯಿಸಿದ್ದು ಹೀಗೆ….

Update: 2018-12-23 18:01 GMT

ಹೊಸದಿಲ್ಲಿ, ಡಿ.23: ವಿವಿಧ ಮೂಲಗಳಿಂದ ಹೊರಸೂಸುವ ಮಲಿನಕಾರಿ ಅಂಶಗಳು ತಾಜ್‌ಮಹಲ್‌ನ ಮೇಲ್ಮೈಗೆ ಅಂಟಿ ಕೂರುತ್ತಿದ್ದು ಈ ಕಣಗಳಿಂದಾಗಿ ಬೆಳಕು ಚದುರಿಹೋಗುತ್ತದೆ. ಆದ್ದರಿಂದ ತಾಜ್‌ಮಹಲ್‌ನ ಬಣ್ಣ ಬದಲಾದಂತೆ ಭಾಸವಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ವಾಯು ಮಾಲಿನ್ಯದಿಂದಾಗಿ ತಾಜ್‌ಮಹಲ್‌ನ ಅಮೃತಶಿಲೆಗಳು ಬಣ್ಣ ಕಳೆದುಕೊಂಡಿವೆಯೇ ಎಂದು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಿಸರ ಇಲಾಖೆಯ ಸಚಿವ ಮಹೇಶ್ ಶರ್ಮ, ಮಾಲಿನ್ಯಕಾರಕಗಳಿಂದ ತಾಜ್‌ಮಹಲ್‌ನ ಮೇಲ್ಮೈ ಬಣ್ಣ ಮಸುಕಾಗದಂತೆ ತಡೆಯಲು ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ) ವೈಜ್ಞಾನಿಕ ಶುದ್ಧೀಕರಣ ಕಾರ್ಯ ಕೈಗೊಂಡಿದೆ. ಇದರಂತೆ ನಾಲ್ಕು ಮೀನಾರ್‌ಗಳ ಸಹಿತ ಪ್ರಮುಖ ಭಾಗಗಳನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದೆ. ಆದರೆ ಪ್ರಧಾನ ಗುಮ್ಮಟದ ಶುದ್ಧೀಕರಣ ಕಾರ್ಯಕ್ಕೆ ತಾಂತ್ರಿಕ ಅಧ್ಯಯನದ ಅಗತ್ಯವಿದೆ ಎಂದವರು ತಿಳಿಸಿದ್ದಾರೆ.

ಯಮುನಾ ನದಿಯ ಕಲುಷಿತ ನೀರಿನ ಕಾರಣ ತಾಜ್‌ಮಹಲ್ ದುರ್ಬಲಗೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನದಿಯು ಸ್ಮಾರಕದ ಉತ್ತರ ಗೋಡೆಗಿಂತ ಬಹಳಷ್ಟು ದೂರದಲ್ಲಿದೆ. ಆದ್ದರಿಂದ ತಾಜ್‌ಮಹಲ್‌ನ ಅಡಿಪಾಯದ ಸಾಮರ್ಥ್ಯದ ಬಗ್ಗೆ ಅಧ್ಯಯನ ನಡೆಸಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News