×
Ad

ಸಿರಿಯದಿಂದ ಸೇನೆ ವಾಪಸ್: ಅಮೆರಿಕ ಪ್ರತಿನಿಧಿ ರಾಜೀನಾಮೆ

Update: 2018-12-23 23:59 IST

ವಾಶಿಂಗ್ಟನ್, ಡಿ. 23: ಸಿರಿಯದಿಂದ ಅಮೆರಿಕ ಸೇನೆಯನ್ನು ವಾಪಸ್ ಕರೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡಿರುವ ದಿಢೀರ್ ನಿರ್ಧಾರವನ್ನು ಪ್ರತಿಭಟಿಸಿ, ಐಸಿಸ್ ಭಯೋತ್ಪಾದಕ ಗುಂಪಿನ ವಿರುದ್ಧ ಹೋರಾಡುತ್ತಿರುವ ಜಾಗತಿಕ ಮಿತ್ರಕೂಟಕ್ಕೆ ಅಮೆರಿಕದ ರಾಯಭಾರಿಯಾಗಿರುವ ಬ್ರೆಟ್ ಮೆಕ್‌ಗರ್ಕ್ ರಾಜೀನಾಮೆ ನೀಡಿದ್ದಾರೆ.

ಐಸಿಸ್ ಸೋತಿದೆ ಎಂಬುದಾಗಿ ಭಾವಿಸುವುದು ‘ದುಡುಕಿನ ನಿರ್ಧಾರ’ವಾಗಿರುತ್ತದೆ, ಹಾಗಾಗಿ, ಅಮೆರಿಕ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದು ಮೂರ್ಖತನದ ನಿರ್ಧಾರವಾಗುತ್ತದೆ ಎಂಬುದಾಗಿ 11 ದಿನಗಳ ಹಿಂದೆಯಷ್ಟೇ ಅವರು ಹೇಳಿದ್ದರು.

ಮೆಕ್‌ಗರ್ಕ್‌ರನ್ನು 2015ರಲ್ಲಿ ಈ ಹುದ್ದೆಗೆ ಅಂದಿನ ಅಧ್ಯಕ್ಷ ಬರಾಕ್ ಒಬಾಮ ನೇಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News