×
Ad

ಸ್ಮೈಲ್ ಫೌಂಡೇಶನ್ ಕುಳಾಯಿ: ಉಚಿತ ಕಣ್ಣಿನ ತಪಾಸಣಾ ಶಿಬಿರ

Update: 2018-12-24 00:22 IST

ಮಂಗಳೂರು, ಡಿ. 23: ಸ್ಮೈಲ್ ಫೌಂಡೇಶನ್ ಕುಳಾಯಿ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.

ಸ್ಟೈಲ್ ಫೌಂಡೇಶನ್ ಕುಳಾಯಿ ಮತ್ತು ಪ್ರಸಾದ್ ನೇತ್ರಾಲಯ ಇದರ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಬಗ್ಗೆ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ವೆಂಕಟ್ ರಾವ್  ಕಾರ್ಯದರ್ಶಿ ಹೆಚ್.ವಿ ಸಂಘ ಸುರತ್ಕಲ್ ವಹಿಸಿದರು. ಮುಖ್ಯ ಅತಿಥಿಗಳಾಗಿ ವಿಕ್ರಮ್ ಜೈನ್ ವೈದ್ಯಾಧಿಕಾರಿ ಪ್ರಶಾದ್ ನೇತ್ರಾಲಯ,ಮಧುಕರ್ ಕನ್ನರ್ ಸಾರ್ವಜನಿಕ ಸಂಪರ್ಕ ಅಧಿಕಾರಿ,ರಫೀಕ್ ಮಿತ್ತಬೆಟ್ಟು ಉದ್ಯಮಿ,ಶರೀಫ್ ಬಿ.ಎಂ ಸಲಹಾಧ್ಯಕ್ಷರು  ಸ್ಟೈಲ್ ಫೌಂಡೇಶನ್ ಕುಳಾಯಿ, ಗಂಗಾಧರ್ ಬಂಜನ್ ನಾಗರಿಕ ಸಮಿತಿ ಕುಳಾಯಿ, ಸತೀಶ್ ಸದಾನಂದ ಸಂಯೋಜರು ರಾಮಕೃಷ್ಣ ಮಿಷನ್ ಸುರತ್ಕಲ್ ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸಿದರು. ಈ ಕಾರ್ಯಕ್ರಮದ ಪ್ರಯುಕ್ತವಾಗಿ 95ಕ್ಕೂ ಅಧಿಕ ಮಂದಿ ಆಗಮಿಸಿ ಇದರ ಸದುಪಯೋಗ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News