ಪಕೀರ್ಣಕಟ್ಟೆ: ಜಮೀಯತುಲ್ ಫಲಾಹ್‌ನಿಂದ ಆರೋಗ್ಯ, ನೇತ್ರ ತಪಾಸಣಾ ಶಿಬಿರ

Update: 2018-12-24 05:51 GMT

ಕಾಪು, ಡಿ.24: ಜಮಿಯ್ಯತುಲ್ ಫಲಾಹ್ ಕಾಪು ಘಟಕ, ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆ ಮತ್ತು ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಇವರ ಸಹಭಾಗಿತ್ವದಲ್ಲಿ ಮಲ್ಲಾರು ಪಕೀರ್ಣಕಟ್ಟೆ ಖಾಜ ಪೀರಾನ್ ಮೆಡಿಕಲ್ ಸೆಂಟರ್ (ಆಯುಷ್ ಆಸ್ಪತ್ರೆ)ನಲ್ಲಿ ಉಚಿತ ಸಾಮಾನ್ಯ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ ಇತ್ತೀಚೆಗೆ ನಡೆಯಿತು.

ಶಿಬಿರವನ್ನು ಉದ್ಘಾಟಿಸಿದ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬಡ ವರ್ಗದ ಜನರ ಆರೋಗ್ಯ ಮತ್ತು ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಇಟ್ಟು ನಿರಂತರವಾಗಿ ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳುವ ಜಮಿಯ್ಯತುಲ್ ಫಲಾಹ್‌ನ ಕಾರ್ಯವೈಖರಿ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶಬಿ ಅಹ್ಮದ್ ಕಾಝಿ ಮಾತನಾಡಿ, ಕಾಪು ತಾಲೂಕಿನಲ್ಲಿ ಇಂತಹ ಶಿಬಿರಗಳ ಅಗತ್ಯ ತುಂಬಾ ಇದ್ದು, ಪ್ರತಿದಿನ ಇಂತಹ ಸೇವೆ ದೊರಕಬೇಕು ಎನ್ನುವ ಇಚ್ಛೆ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಬೆಳಪು ಗ್ರಾಮವನ್ನು ಆಯ್ಕೆ ಮಾಡಿದ್ದು, ಇದಕ್ಕಾಗಿ ಪ್ರಯತ್ನ ನಡೆಯುತ್ತಿದೆ. ಎಲ್ಲರ ಸಹಕಾರ ಅಗತ್ಯ ಎಂದರು.

ಮೌಲಾನಾ ಮುಹಮ್ಮದ್ ಫರ್ವೇಝ್ ಆಲಂ ಕಿರಾಅತ್ ಪಠಿಸಿದರು. ಹಾಜಿ ಅಬ್ದುಲ್ ಜಲೀಲ್ ಉದ್ಯಾವರ, ನೇತ್ರ ತಜ್ಞೆ ಡಾ.ರೂಪಶ್ರೀ, ಸಂಸ್ಥೆಯ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಸಂದರ್ಭೋಚಿತವಾಗಿ ಮಾತನಾಡಿದರು.

ಡಾ ಲೀಲಾ ಥೋಮಸ್, ಡಾ ಸುಮನ್ ಆರ್. ಶೆಟ್ಟಿ, ರೋಹಿ ರತ್ನಾಕರ, ರಾಘವೇಂದ್ರ ಕರ್ವಾಲ್, ಜಮೀಯ್ಯತುಲ್ ಫಲಾಹ್‌ನ ಮುಷ್ತಾಕ್ ಇಬ್ರಾಹೀಂ, ಸಾಬಿರ್ ಅಲಿ, ಶಾಬುದ್ದೀನ್ ಸಾಹೇಬ್, ನಝೀರ್ ಅಹ್ಮದ್, ಎಸ್.ಎಂ.ಶಫಿ ಅಹ್ಮದ್, ರಫೀಕ್ ಅಹ್ಮದ್, ಬಶೀರ್ ಅಹ್ಮದ್, ಸಿರಾಜುದ್ದೀನ್ ಕಾಝಿ, ಇಕ್ಬಾಲ್ ಶಂಸುದ್ದೀನ್ ಉಪಸ್ಥಿತರಿದ್ದರು.

ಜಮಿಯ್ಯತುಲ್ ಫಲಾಹ್‌ನ ಕಾಪು ಘಟಕದ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಆದಂ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಸ್ಥೆಯ ಪತ್ರಿಕಾ ಕಾರ್ಯದರ್ಶಿ ಅನ್ವರ್ ಅಲಿ ಕಾಪು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಸುಮಾರು 125 ಮಂದಿ ಶಿಬಿರದ ಪ್ರಯೋಜನ ಪಡೆದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News