ಅಕ್ಬರ್ ಕೋಟೆಯೊಳಗೆ ಸರಸ್ವತಿ, ರಿಷಿ ಭಾರಧ್ವಾಜ್ ಪ್ರತಿಮೆ ನಿರ್ಮಿಸುತ್ತೇವೆ: ಆದಿತ್ಯನಾಥ್

Update: 2018-12-24 07:55 GMT

ಲಕ್ನೋ, ಡಿ.24:  ಅಲಹಾಬಾದ್ ನಲ್ಲಿ ಮೊಘಲ್ ದೊರೆ ಕಟ್ಟಿದ ಕೋಟೆಯಲ್ಲಿ ಸರಸ್ವತಿ ಮತ್ತು ರಿಷಿ ಭಾರಧ್ವಾಜ್ ಪ್ರತಿಮೆಗಳನ್ನು ನಿರ್ಮಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ಲಕ್ನೋದಲ್ಲಿ ಯುವ ಕುಂಭ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕುಂಭ ಮೇಳದ ಸಂದರ್ಭ ಇದೇ ಮೊದಲ ಬಾರಿಗೆ ಅಕ್ಷಯ್ ವಟ್ ಮತ್ತು ಸರಸ್ವತಿ ಕೂಪ್ ಅನ್ನು ತೆರೆಯಲಾಗುವುದು. ಅಲ್ಲಿ ಮೊಘಲ್ ದೊರೆ ಅಕ್ಬರ್ ಕೋಟೆಯೊಂದನ್ನು ಕಟ್ಟಿದ್ದ. ಆದ್ದರಿಂದ ಜನರಿಗೆ ಅಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದವರು ಹೇಳಿದರು.

ಮುಂದಿನ ವರ್ಷ ನಡೆಯಲಿರುವ ಕುಂಭ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ. ಅತೀ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಇದೇ ಮೊದಲ ಬಾರಿಗೆ ಯುನೆಸ್ಕೋ ಕುಂಭಮೇಳವನ್ನು ಗುರುತಿಸಿದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News