ಹೆಬ್ರಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಬೆಂಕಿ ಅಕಸ್ಮಿಕ: ದಾಖಲೆ, ಸೊತ್ತುಗಳಿಗೆ ಹಾನಿ

Update: 2018-12-24 14:21 GMT

ಹೆಬ್ರಿ, ಡಿ.24: ಸಿಂಡಿಕೇಟ್ ಬ್ಯಾಂಕ್ ಹೆಬ್ರಿ ಶಾಖಾ ಕಚೇರಿಯಲ್ಲಿ ರವಿವಾರ ತಡ ರಾತ್ರಿ ಸಂಭವಿಸಿದ ವಿದ್ಯುತ್ ಸರ್ಕ್ಯೂಟಿನಿಂದ ದಾಖಲೆಗಳು ಹಾಗೂ ಸೊತ್ತುಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ವರದಿಯಾಗಿವೆ.

ರಾತ್ರಿ 11 ಗಂಟೆ ಸುಮಾರಿಗೆ ಬ್ಯಾಂಕಿನ ಕಟ್ಟಡದಿಂದ ದಟ್ಟವಾದ ಹೊಗೆ ಬರುತ್ತಿರುವುಧನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಹೆಬ್ರಿ ಪೊಲೀಸ್ ಮತ್ತು ಮೆಸ್ಕಾಂಗೆ ಮಾಹಿತಿ ನೀಡಿದರು. ಮೆಸ್ಕಾಂ ಕೂಡಲೆ ವಿದ್ಯುತ್ ಸಂಪರ್ಕ ವನ್ನು ಕಡಿತಗೊಳಿಸಿದರೆ, ಸ್ಥಳಕ್ಕೆ ಆಗಮಿಸಿದ ಹೆಬ್ರಿ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ಸೇರಿ ಬೆಂಕಿ ನಂದಿಸುವ ಕಾರ್ಯ ಮಾಡಿದರು.

ಬಳಿಕ ಆಗಮಿಸಿದ ಅಗ್ನಿಶಾಮಕ ದಳದ ಸಿಂಬ್ಬದಿಗಳು ಸಂಪೂರ್ಣವಾಗಿ ಬೆಂಕಿಯನ್ನು ನಂದಿಸಿದರು. ಸ್ಥಳೀಯ ಮುಖಂಡರು ಬೆಂಕಿ ನಂದಿಸಲು ಸಹಕರಿಸಿದರು. ಬೆಂಕಿ ಅನಾಹುತದಿಂದ ಬ್ಯಾಂಕಿನ ಸಮೀಪದಲ್ಲೇ ಇರುವ ಮನೆಗೂ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಬೆಂಕಿ ಅಕಸ್ಮಿಕದಿಂದ ಬ್ಯಾಂಕ್ ಕಚೇರಿ ಒಳಗಡೆ ಇದ್ದ ಕಂಪ್ಯೂಟರ್‌ಗಳು, ಹವಾನಿಯಂತ್ರಣ, ಫ್ಯಾನ್, ಪೀಟೊಪಕರಣಗಳು, ಕೆಲವು ದಾಖಲಾತಿಗಳು ಸಂಪೂರ್ಣ ಸುಟ್ಟು ಹೋಗಿವೆ. ಲಾಕರ್ ಒಳಗಡೆ ಇದ್ದ ಅತ್ಯಮೂಲ್ಯ ದಾಖಲೆಗಳು ಮತ್ತು ವಸುತಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News