‘ದಲಿತ ಹತ್ಯಾಕಾಂಡ-50’: ಡಿ.25ರಂದು ಬಹಿರಂಗ ಜಾಗೃತಿ ಸಭೆ
Update: 2018-12-24 22:41 IST
ಉಡುಪಿ, ಡಿ.24: ಸ್ವತಂತ್ರ ಭಾರತದ ಮೊದಲ ದಲಿತ ದೌರ್ಜನ್ಯದ ‘ಕಿಲ್ವಾನ್ ಮಣಿ ಹತ್ಯಾಕಾಂಡ’ ಪ್ರಕರಣಕ್ಕೆ 50 ವರ್ಷಗಳಾಗುತ್ತಿದ್ದು, ಈ ಹಿನ್ನೆಲೆ ಯಲ್ಲಿ ಡಿ.25ರಂದು ಸಂಜೆ 5 ಗಂಟೆಗೆ ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಬಹಿರಂಗ ಜಾಗೃತ ಸಭೆಯನ್ನು ಆಯೋಜಿಸಲಾಗಿದೆ.
ಮೊದಲು ಮತ್ತು ನಂತರವೂ ಅನೇಕ ದಲಿತ ದೌರ್ಜನ್ಯ ಪ್ರಕರಣಗಳು ತಡೆ ಇಲ್ಲದಂತೆ ನಡೆಯುತ್ತಲೇ ಬಂದಿದ್ದು, ನಿನ್ನೆ-ಇಂದು ನಡೆಯುವ ಜಾತಿ ಆಧಾರಿತ ದೌರ್ಜನ್ಯಗಳು ನಾಳೆಯಾದರೂ ನಿಲ್ಲಬೇಕು. ಅದಕ್ಕಾಗಿ ಕಿಲ್ವಾನ್ ಮಣಿ ದಲಿತ ಹತ್ಯಾಕಾಂಡದ 50ನೇ ವರ್ಷವನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಉಡುಪಿ ಘಟಕಗಳು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಳ ಮಹಾ ಒಕ್ಕೂಟದ ಸಹಕಾರದೊಂದಿಗೆ ಆಚರಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.