×
Ad

ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2018-12-25 22:04 IST

ಮಂಗಳೂರು, ಡಿ. 25:  ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಕಿನ್ಯ ಸೆಕ್ಟರ್ ಇದರ 2018ರ ಸಾಲಿನ ವಾರ್ಷಿಕ ಮಹಾಸಭೆ ಸೆಕ್ಟರ್ ಅಧ್ಯಕ್ಷ ಇರ್ಫಾನ್ ನೂರಾನಿ ಅಧ್ಯಕ್ಷತೆಯಲ್ಲಿ ನಡೆಯಿತು.

ನಮ್ಮನ್ನಗಲಿದ ಸುನ್ನೀ ಸಂಘ ಕುಟುಂಬದ ನಾಯಕರು ಹಾಗೂ ಕಾರ್ಯಕರ್ತರ ಪರಲೋಕ ವಿಜಯಕ್ಕಾಗಿ ಝಿಕ್ರ್ ಮಜ್ಲಿಸ್ ಹಾಗೂ ದುಆ ಕಾರ್ಯಕ್ರಮ ವನ್ನು ಸೈಯ್ಯದ್ ಶಿಹಾಬುದ್ದೀನ್ ಅಲ್ ಬುಖಾರಿ ಕಿನ್ಯ ನಡೆಸಿದರು. ನಂತರ ಡಿವಿಜನ್ ಚುಣಾವಣಾಧಿಕಾರಿ ಇಲ್ಯಾಸ್ ಪೊಟ್ಟೋಳಿಕೆ ನೇತೃತ್ವದಲ್ಲಿ ನಡೆದ ಸಭೆಯನ್ನು ಸೈಯ್ಯದ್ ಆಬಿದ್ ತಂಙಳ್ ಮೀಂಪ್ರಿ  ಉದ್ಘಾಟಿಸಿ, ಹಳೆ ಸಮಿತಿಯನ್ನು ಬರ್ಕಾಸ್ತುಗೊಳಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ 

ಅಧ್ಯಕ್ಷರಾಗಿ ಇರ್ಫಾನ್ ನೂರಾನಿ, ಉಪಾಧ್ಯಕ್ಷರಾಗಿ ಸೈಯ್ಯದ್ ಆಬಿದ್ ತಂಙಳ್, ಜಹ್ಫರ್ ಖುತುಬಿನಗರ, ಪ್ರಧಾನ ಕಾರ್ಯದರ್ಶಿಯಾಗಿ ಫಯಾಝ್ ಕಿನ್ಯ, ಜೊತೆ ಕಾರ್ಯದರ್ಶಿ ಬಶೀರ್ ಕೂಡಾರ, ಫಯಾಝ್ ಉಕ್ಕುಡ, ಕೋಶಾಧಿಕಾರಿಯಾಗಿ ಅಯ್ಯೂಬ್ ಖುತುಬಿನಗರ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಆಶಿಕ್ ಮೀಂಪ್ರಿ, ಹೈಸ್ಕೂಲ್ ಕನ್ವೀನರ್ ಸಾಧಿಕ್ ಕುರಿಯ, ಇಶಾರ ಕನ್ವೀನರ್ ನುಹ್ಮಾನ್ ಕೂಡಾರ,ಎಸ್ ಬಿ ಎಸ್  ಕನ್ವೀನರ್ ಇಕ್ಬಾಲ್ ಖುತುಬಿನಗರ ಹಾಗೂ ಇತರ 14 ಮಂದಿ ಕಾರ್ಯಾಕಾರಿ ಸದಸ್ಯರನ್ನಾಗಿ ನೇಮಿಸಲಾಯಿತು.

ಈ ಕಾರ್ಯಕ್ರಮದಲ್ಲಿ  ವಾರ್ಷಿಕ ವರದಿಯನ್ನು ಫಯಾಝ್ ಕಿನ್ಯ ಮಂಡಿಸಿದರು. ಲೆಕ್ಕಪತ್ರ ಸೈಯ್ಯದ್ ತ್ವಾಹ ವಿವರಿಸಿದರು. ಮೆಹಬೂಬ್ ಸಖಾಫಿ ಕಿನ್ಯ ಸಂಘಟನಾ ತರಗತಿ ನಡೆಸಿದರು. ಉಸ್ಮಾನ್ ಝುಹ್ರಿ, ಎಂ ಕೆ ಎಂ ಇಸ್ಮಾಯಿಲ್ ಈ ಸಂದರ್ಭ ಮಾತನಾಡಿದರು.

 ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಶರೀಫ್ ಸಹದಿ ಕಿನ್ಯ, ಹಾರಿಸ್ ಸಖಾಫಿ, ಇಲ್ಯಾಸ್ ಮದನಿ, ಇರ್ಫಾನ್ ಮುಸ್ಲಿಯಾರ್, ಅಶ್ರಫ್ ಮದೀನ ಕೆಸಿಎಫ್, ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ, ಹನೀಫ್ ಕುರಿಯ, ಹನೀಫ್ ಸ್ಟೋರ್, ಅಝೀಝ್ ಸಾಗ್, ಸಲಾಂ ಬಾಕಿಮಾರ್ ಅಲ್ಲದೆ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವ್ಯಾಪ್ತಿಯ ಶಾಖೆಗಳ ನಾಯಕರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News