×
Ad

ಅಮೆರಿಕದಲ್ಲಿ ಅಗ್ನಿ ಅವಘಡ: ಭಾರತದ ಮೂಲದ 3 ಮಕ್ಕಳು ಮೃತ್ಯು

Update: 2018-12-26 16:57 IST

ವಾಶಿಂಗ್ಟನ್, ಡಿ. 26: ಅಮೆರಿಕದ ಕಾಲೀರ್ವಿಲ್‌ನಲ್ಲಿನ ಮನೆಯೊಂದರಲ್ಲಿ ಕ್ರಿಸ್ಮಸ್ ಮುನ್ನಾ ದಿನ ನಡೆದ ಬೆಂಕಿ ದುರಂತದಲ್ಲಿ ಮೂವರು ಹದಿಹರೆಯದ ಭಾರತೀಯ ಸಹೋದರ-ಸಹೋದರಿಯರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಕಾಲೀರ್ವಿಲ್‌ನ ಓರ್ವ ಮಹಿಳೆ ಕ್ಯಾರಿ ಕೋಡ್ರಿಯಟ್, 17 ವರ್ಷದ ಶಾರನ್, 15 ವರ್ಷದ ಜಾಯ್ ಮತ್ತು 14 ವರ್ಷದ ಆರನ್ ಮೃತಪಟ್ಟವರು. ಈ ವಿಷಯವನ್ನು ಕಾಲೀರ್ವಿಲ್ ಬೈಬಲ್ ಚರ್ಚ್ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಮೃತಪಟ್ಟ ಹದಿಹರಯದ ಸಹೋದರ-ಸಹೋದರಿಯರು ಭಾರತದ ನಾಯಕ್ ಕುಟುಂಬದ ಸದಸ್ಯರು.

‘‘ಕೋಡ್ರಿಯಟ್‌ರ ಮನೆಯಲ್ಲಿ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತು. ಕೋಡ್ರಿಯಟ್ ಕುಟುಂಬವು ಕ್ರಿಸ್‌ಮಸ್ ಕೂಟವನ್ನು ಏರ್ಪಡಿಸಿತ್ತು. ಅದರಲ್ಲಿ ಮೂವರು ಹದಿಹರೆಯದ ಸೋದರ-ಸೋದರಿಯರು ಭಾಗವಹಿಸಿದ್ದರು’’ ಎಂದು ಹೇಳಿಕೆ ತಿಳಿಸಿದೆ.

ಕೋಡ್ರಿಯಟ್‌ರ ಗಂಡ ಡ್ಯಾನಿ ಮತ್ತು ಮಗ ಕೋಲ್ ಬೆಂಕಿಯಿಂದ ತಪ್ಪಿಸಿಕೊಂಡು ಮನೆಯ ಹೊರಗೆ ಹೋಗುವಲ್ಲಿ ಯಶಸ್ವಿಯಾದರು.

ನಾಯಕ್ ಕುಟುಂಬವು ತೆಲಂಗಾಣದ ಗೋಲ್ಕೊಂಡದಲ್ಲಿ ವಾಸಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News