ಪಕ್ಕಲಡ್ಕ ಯುವಕ ಮಂಡಲಕ್ಕೆ ಆಯ್ಕೆ
ಮಂಗಳೂರು, ಡಿ.26: ಪಕ್ಕಲಡ್ಕ ಯುವಕ ಮಂಡಲ (ರಿ)ದ 65ನೇ ವರ್ಷದ ಮಹಾಸಭೆಯು ನಾಗೇಶ್ ಶೆಟ್ಟಿಯ ಅಧ್ಯಕ್ಷತೆಯಲ್ಲಿ ನಡೆದು ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬಿ. ನಾಗೇಶ್ ಶೆಟ್ಟಿ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ಬಜಾಲ್, ಉಪಾಧ್ಯಕ್ಷರಾಗಿ ಕಮಲಾಕ್ಷ ಶೆಟ್ಟಿ, ಲೋಕೇಶ್ ಎಂ., ದೀಪಕ್ ಬಜಾಲ್, ಸುರೇಶ್ ಬಜಾಲ್, ಜೊತೆ ಕಾರ್ಯದರ್ಶಿಯಾಗಿ ನೂರುದ್ದೀನ್, ಪ್ರೀತಮ್ ಕುಂದರ್, ಸಂತೋಷ್ ಬಜಾಲ್, ಕೋಶಾಧಿಕಾರಿಯಾಗಿ ಪ್ರಕಾಶ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರೀತೇಶ್ ಬಜಾಲ್, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಧೀರಜ್ ಬಜಾಲ್, ರಿತೇಶ್ ಬಜಾಲ್, ಕಚೇರಿ ನಿರ್ವಾಹಕರಾಗಿ ಪ್ರದೀಪ್ ಶೆಟ್ಟಿ, ಉದಯ ಕುಂಟಲಗುಡ್ಡೆ ಹಾಗೂ ಸಮಿತಿ ಸದಸ್ಯರಾಗಿ ಪ್ರಶಾಂತ್ ಕುಡ್ತಡ್ಕ, ವರಪ್ರಸಾದ್, ಅಶೋಕ್ ಸಾಲ್ಯಾನ್, ಲೋಕೇಶ್ ಏನೆಲ್ಮಾರ್, ದೀಕ್ಷಿತ್ ಭಂಡಾರಿ, ಪ್ರಜ್ವಲ್, ಸೋನಿಲ್, ಡೊಲ್ಫಿ ಡಿಸೋಜ ಆಯ್ಕೆಗೊಂಡರು.
ಸಲಹಾ ಸಮಿತಿ ಸದಸ್ಯರಾಗಿ ಯುವಕ ಮಂಡಲದ ಹಿರಿಯ ನಾಯಕರಾದ ಪ್ರಭಾಕರ್ ಟೈಲರ್, ಜಯಂತ್ ಪಕ್ಕಲಡ್ಕ, ಗಿರೀಶ್, ಹರಿಶ್ಚಂದ್ರ, ಲಕ್ಷ್ಮಣ್ ಕುಡ್ತಡ್ಕ, ಮೋಹನದಾಸ್ ಕುಡ್ತಡ್ಕ, ಸುನೀಲ್ ಬಜಾಲ್, ವಿಜಯ ಬಜಾಲ್, ಸತೀಶ್ ನಾಯ್ಕ್, ಕೇಶವ ಭಂಡಾರಿ, ರಾಘವ ಅಂಚನ್ ಆಯ್ಕೆಗೊಂಡರು.