×
Ad

ಅಂತರ್ ಜಿಲ್ಲಾ ಬಂಟರ ಕ್ರೀಡೋತ್ಸವ: ಸುರತ್ಕಲ್ ಬಂಟರ ಸಂಘಕ್ಕೆ ಸಮಗ್ರ ಪ್ರಶಸ್ತಿ

Update: 2018-12-26 19:09 IST

ಮಂಗಳೂರು, ಡಿ.26 : ಬಂಟರ ಸಂಘ ಕಾವೂರು ಇದರ ಆಶ್ರಯದಲ್ಲಿ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 9ನೇ ಅಂತರ್‌ಜಿಲ್ಲಾ ಬಂಟರ ಕ್ರೀಡೋತ್ಸವದಲ್ಲಿ ಸುರತ್ಕಲ್ ಬಂಟರ ಸಂಘವು 24 ಚಿನ್ನ, 14 ಬೆಳ್ಳಿ, 14 ಕಂಚಿನ ಪದಕಗಳನ್ನು ಗಳಿಸಿ ಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ವೇಣೂರು ವಹಿಸಿದ್ದರು.

ಮೇಯರ್ ಭಾಸ್ಕರ್, ಶಾಸಕ ಡಾ. ವೈ. ಭರತ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಗಿರೀಶ್ ಎಂ. ಶೆಟ್ಟಿ ಕಟೀಲು, ಜಗನ್ನಾಥ ಚೌಟ, ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಸಮಗ್ರ ಪ್ರಶಸ್ತಿಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜ , ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ತಡಂಬೈಲ್ ಗುತ್ತು, ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಮಂಚೂರು, ಮಹಿಳಾ ವೇದಿಕೆಯ ಅಧ್ಯಕ್ಷೆ ಬೇಬಿ ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಜೆ. ಶೆಟ್ಟಿ, ಪದಾಧಿಕಾರಿಗಳಾದ ಪುಷ್ಪರಾಜ ಶೆಟ್ಟಿ ಕುಡುಂಬೂರು, ಗುಣಶೇಖರ ಶೆಟ್ಟಿ, ಲೀಲಾಧರ ಶೆಟ್ಟಿ, ಬಬಿತಾ ಶೆಟ್ಟಿ, ದೇವೇಂದ್ರ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಸುರತ್ಕಲ್ ಬಂಟರ ಸಂಘದ ಸದಸ್ಯೆ ಬಬಿತಾ ಶೆಟ್ಟಿ ಶಾಟ್‌ಪುಟ್, 100 ಮತ್ತು 50 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ, ಭವಿಷ್ ಶೆಟ್ಟಿ ಚೇಳಾರ್ 100ಮೀ, 200 ಮೀ ಹಾಗೂ ರಿಲೇಯಲ್ಲಿ ಚಿನ್ನದ ಪದಕ ಪಡೆದರು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿದ್ಯಾಚರಣ್ ಶೆಟ್ಟಿ ನೇತೃತ್ವದಲ್ಲಿ ಸುರತ್ಕಲ್ ಬಂಟರ ಸಂಘವು ರನ್ನರ್ಸ್‌ ಆಪ್ ಪ್ರಶಸ್ತಿ ಪಡೆಯಿತು.

ಕಾರ್ಯಕ್ರಮದಲ್ಲಿ ಕಾವೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅವಿನಾಶ್ ನಾಯ್ಕ, ಉಪಾಧ್ಯಕ್ಷರಾದ ಗಿರಿಜಾತೆ ಆರ್. ಭಂಡಾರಿ, ನಿಟ್ಟೆ ಶಶಿಧರ ಶೆಟ್ಟಿ, ಡಿ.ಸುಧಾಕರ ಶೆಟ್ಟಿ ಮುಗ್ರೋಡಿ, ವಾಮನ ಶೆಟ್ಟಿ ಉರುಂದಾಡಿ, ತುಕರಾಮ ಶೆಟ್ಟಿ ತೋಡ್ಲ , ಕ್ರೀಡಾ ಕಾರ್ಯದರ್ಶಿ ಚಂದ್ರರಾಜ್ ಶೆಟ್ಟಿ ದೋಣಿಂಜೆಗುತ್ತು, ಕೋಶಾಧಿಕಾರಿ ಲಕ್ಷ್ಮಿನಾರಾಯಣ ಶೆಟ್ಟಿ, ಎಂ.ಎಸ್. ಶೆಟ್ಟಿ, ಸದಾಶಿವ ಶೆಟ್ಟಿ, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಸುಜಯಾ ಎಸ್. ಶೆಟ್ಟಿ, ರೇಖಾ ವಿ. ಶೆಟ್ಟಿ, ಶ್ವೇತಾ ಆರ್. ಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News