ಡಿ.29ರಿಂದ ಕೈರಂಗಳದಲ್ಲಿ ಕೃಷಿ ಉತ್ಸವ

Update: 2018-12-26 14:20 GMT

ಮುಡಿಪು, ಡಿ. 26: ಕೈರಂಗಳದ ಶ್ರೀ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಕೃಷಿ ಉತ್ಸವ ಹಾಗೂ ಕೃಷಿ ಯಂತ್ರೋಪಕರಣಗಳ ಪ್ರದರ್ಶನವು ಡಿ. 29 ಮತ್ತು 30 ರಂದು ನಡೆಯಲಿದ್ದು ಸಕಲ ಸಿದ್ಧತೆ ನಡೆದಿದೆ ಎಂದು ಉತ್ಸವ ಸಮಿತಿ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ಅವರು ಹೇಳಿದರು.

ಅವರು ಪುಣ್ಯಕೋಟಿನಗರ ಶ್ರೀ ಶಾರದಾಗಣಪತಿ ವಿದ್ಯಾಕೇಂದ್ರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  ಯುವ ಜನತೆಯ ನಡೆ ಕೃಷಿ ಕ್ಷೇತ್ರದ ಕಡೆಗೆ ದ್ಯೇಯ ವಾಕ್ಯದೊಂದಿಗೆ ಉತ್ಸವ ನಡೆಯಲಿದ್ದು, ತೆಂಗು ಕೃಷಿ ಹಾಗೂ ಮೌಲ್ಯವರ್ದನೆ, ಗೇರು ಹಾಗೂ ಕರಿಮೆಣಸು, ಕೊಕ್ಕೊ ಬೆಳೆ ಸಂರಕ್ಷಣೆ ಮತ್ತು ಸಂವರ್ದನೆ, ಕೃಷಿ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪ್ರಭಾವ, ಅಡಿಕೆ ಬಳೆ ನಿರ್ವಹಣೆ ಹಾಗೂ ಆದರ್ಶ ಕೃಷಿಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೃಷಿ ಉತ್ಸವದಲ್ಲಿ ಕೃಷಿ ವಸ್ತು ಪ್ರದರ್ಶನ, ವಿಚಾರ ಸಂಕಿರಣ, ಯಂತ್ರಗಳ ಪ್ರದರ್ಶನ, ಸುಧಾರಿತ ಕೃಷಿ ಪದ್ದತಿಗಳ ಪರಿಚಯ, ಕೃಷಿ ತೋಟಗಾರಿಕಾ ಇಲಾಖೆ ಮಳಿಗೆಗಳು, ಸಹಕಾರಿ ಸಂಘಗಳು ಭಾಗವಹಿಸಲಿವೆ ಎಂದರು. 

ಕೃಷಿ ಉತ್ಸವದಲ್ಲಿ ಪಾಲ್ಗೊಳ್ಳು 132 ಸ್ಟಾಲುಗಳ ಬೇಡಿಕೆಯಿದ್ದರೂ 109 ಸ್ಟಾಲುಗಳಿಗೆ ವ್ಯುವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಆದರ್ಶ ಕೃಷಿಕರು. ಮತ್ತೆ ಕೃಷಿಯತ್ತ ಮುಖ ಮಾಡಿದ ಯುವಕರು, ಸಾಪ್ಟ್‍ವೇರ್ ಉದ್ಯೋಗ ತೊರೆದು ಕೃಷಿಯತ್ತ ಆಕರ್ಷಿತರಾದವರು ಹಾಗೂ ಕೃಷಿಯಲ್ಲಿ ಸಾಧನೆ ಮಾಡಿದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಹಾಗೂ ಪ್ರತೀ ವರ್ಷ ಡಿಸೆಂಬರ್‍ನಲ್ಲಿ ಇಂತಹ ಕೃಷಿ ಉತ್ಸವವನ್ನು ಏರ್ಪಡಿಸಲಾಗುವುದು ಎಂದರು.

10 ಸಾವಿರ ಜನರು ಸೇರುವ ನಿರೀಕ್ಷೆ

ಕೃಷಿ ಉತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ಈ ಭಾಗದಲ್ಲಿ ಇಂತಹ ಕೃಷಿ ಉತ್ಸವ ನಡೆಯವುದು ಇದೇ ಪ್ರಥಮ. ಈ ಕೃಷಿ ಉತ್ಸವದಲ್ಲಿ ಕೃಷಿಕರು ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿ ಕೃಷಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೆ ಈ ಉತ್ಸವದಲ್ಲಿ ಸುಮಾರು 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. 

ಡಿ.29ರಂದು ಬೆಳಿಗ್ಗೆ 9.30ಕ್ಕೆ ಕೃಷಿ ಉತ್ಸವವನ್ನು ಡಾ.ವಿಷ್ಘೇಶ್ವರ ಭಟ್ ಅವರು ಉದ್ಘಾಟಿಸಿಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎನ್.ಆರ್.ನಾಗರಾಜ್, ಡಾ.ಎನ್.ಉದಯಕುಮಾರ್, ಡಾ.ವಿಘ್ನೇಶ್ವರ್  ವರ್ಮುಡಿ, ಡಾ.ರವಿ ಭಟ್, ಚಂದ್ರಶೇಖರ ಚೌಟ, ಚಂದ್ರಶೇಖರ, ಮಹೇಶ್ ಚೌಟ, ಸಮೀರ ರಾವ್ ಹಾಗೂ ರವಿಶಂಕರ ಭಟ್ ಭಾಗವಹಿಸಲಿದ್ದಾರೆ. ಡಿ.30ರಂದು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ದಿವ್ಯರಾಜ್ ಶೆಟ್ಟಿ, ಶಾಲೆಯ ಪ್ರಾಂಶುಪಾಲೆ ದಿವ್ಯದೀಪ, ಶಿಕ್ಷಕ ಶ್ರೀ ಹರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News