ಭಟ್ಕಳ : ಸೋಲಾರ್ ದೀಪದ ಬ್ಯಾಟರಿ ಕಳವು ಪ್ರಕರಣ; ಇಬ್ಬರು ಸೆರೆ
Update: 2018-12-26 19:58 IST
ಭಟ್ಕಳ, ಡಿ. 26: ತಾಲೂಕಿನ ಬೇಂಗ್ರೆ ಶಿರಾಲಿ ಮುರುಡೇಶ್ವರದ ವ್ಯಾಪ್ತಿಯಲ್ಲಿ ಬೀದಿಗಳಲ್ಲಿ ಅಳವಡಿಸಲಾದ ಸೋಲಾರ್ ದೀಪದ ಬ್ಯಾಟರಿಗಳನ್ನು ಕಳವುಗೈದ ಆರೋಪದಲ್ಲಿ ಭಟ್ಕಳದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಗಳನ್ನು ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುರಾಜ್ ಮಹದೇವ್ ನಾಯಕ್ ಹಾಗೂ ಕಂಡುಕೊಳ್ಳು ನಿವಾಸಿ ಸುದೀಪ್ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ.
ಇವರ ಪೈಕಿ ಗುರುರಾಜ್ ಬಿಎ ಪ್ರಥಮ ವರ್ಷದಲ್ಲಿ ಓದುತ್ತಿದ್ದರೆ ಸುದೀಪ್ ಪಿಯುಸಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಬಂಧಿತರಿಂದ ಮೂರು ಸೋಲಾರ್ ಬ್ಯಾಟರಿ ಹಾಗೂ ಬ್ಯಾಟರಿ ತೆಗೆಯಲು ಬಳಸುವ ಸ್ಕ್ರೂ ಡ್ರೈವರ್ ಇನ್ನಿತರ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.