ಯುವತಿ ನಾಪತ್ತೆ: ದೂರು
Update: 2018-12-26 20:31 IST
ಪುತ್ತೂರು, ಡಿ. 26: ಪಾಣಾಜೆ ಗ್ರಾಮದ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಬುಧವಾರ ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ಪಾಣಾಜೆ ಗ್ರಾಮದ ಪರ್ಕಳ ನಿವಾಸಿ ಸುಬ್ರಾಯ ನಾಯ್ಕ ಅವರ ಪುತ್ರಿ ಅಕ್ಷತಾ (20) ನಾಪತ್ತೆಯಾಗಿರುವ ಯುವತಿ. ಅಕ್ಷತಾ ಕಳೆದ ಶನಿವಾರ ಮಧ್ಯಾಹ್ನ ಬೆಟ್ಟಂಪಾಡಿ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದು, ಆಕೆಗಾಗಿ ಹುಡುಕಾಡಿದರೂ ಪತ್ತೆಯಾಗದ ಹಿನ್ನಲೆಯಲ್ಲಿ ಸುಬ್ರಾಯ ನಾಯ್ಕ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಪಾಣಾಜೆ ಗ್ರಾಮದ ನೆರೆಯ ನಿಡ್ಪಳ್ಳಿ ಗ್ರಾಮದ ಪರಿಚಯಸ್ಥರಾಗಿದ್ದ ಕಿರಣ್ ಮಣಿಯಾಣಿ ಎಂಬವರು ಕೂಡಾ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ದೂರಿನಲ್ಲಿ ಆತನ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ.
ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.