×
Ad

ತನ್ನನು ಸ್ಫೋಟಿಸಿಕೊಂಡ ಭಿಕ್ಷುಕನ ವೇಷದಲ್ಲಿದ್ದ ಬಾಂಬರ್: 6 ಸಾವು

Update: 2018-12-26 21:44 IST

ಕಾಬೂಲ್, ಡಿ. 26: ದಕ್ಷಿಣ ಅಫ್ಘಾನಿಸ್ತಾನದ ನಗರ ಕಂದಹಾರ್‌ನಲ್ಲಿ ಭಿಕ್ಷುಕನ ವೇಷದಲ್ಲಿದ್ದ ಆತ್ಮಹತ್ಯಾ ಬಾಂಬರ್ ಒಬ್ಬ ನಡೆಸಿದ ದಾಳಿಯಲ್ಲಿ ಆರು ಮಂದಿ ಪಾಕಿಸ್ತಾನಿಯರು ಮೃತಪಟ್ಟಿದ್ದಾರೆ ಎಂದು ಅಫ್ಘಾನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕಿಸ್ತಾನದ ಬಲೂಚಿಸ್ತಾನ ವಲಯದಿಂದ ಬಂದ ಪಾಕಿಸ್ತಾನಿಗಳ ಗುಂಪೊಂದನ್ನು ಗುರಿಯಾಗಿಸಿ ಆ ದಾಳಿ ನಡೆದಿರುವಂತೆ ಕಂಡುಬರುತ್ತಿದೆ ಎಂದು ಅವರು ಹೇಳಿದರು..

ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳಿಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿದೆ ಎಂಬುದಾಗಿ ಪಾಕಿಸ್ತಾನ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News